ಕರ್ನಾಟಕ

karnataka

ETV Bharat / state

ಆನಂದ್​​ ಅಸ್ನೋಟಿಕರ್​​ ಬೆಂಬಲಿಗನ ಮನೆ, ಕಚೇರಿ ಮೇಲೆ ಐಟಿ ದಾಳಿ

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿರುವ ಆಟೋ ಮಾರ್ಕ್ ಮಾಲೀಕ ಶಕೀಲ್ ಶೇಖ್ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಶೇಖ್ ಅಸ್ನೋಟಿಕರ್ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ.

ಐಟಿ ದಾಳಿ

By

Published : Apr 12, 2019, 5:13 PM IST

ಶಿರಸಿ : ದೋಸ್ತಿ ಅಭ್ಯರ್ಥಿ ಆನಂದ್​​ ಅಸ್ನೋಟಿಕರ್ ಬೆಂಬಲಿಗನ ಮನೆ ಹಾಗೂ ಕಚೇರಿ ಮೇಲೆ ಐಟಿ ದಾಳಿ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿರುವ ಆಟೋ ಮಾರ್ಕ್ ಮಾಲೀಕ ಶಕೀಲ್ ಶೇಖ್ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಶಕೀಲ್ ಸೆಕೆಂಡ್ ಹ್ಯಾಂಡ್ ಕಾರ್ ಡೀಲರ್ ಆಗಿದ್ದು, 5 ಜನ ಐಟಿ ಅಧಿಕಾರಿಗಳಿಂದ ಮನೆ ಮತ್ತು ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ.

ಆನಂದ ಅಸ್ನೋಟಿಕರ್ ಬೆಂಬಲಿಗನ ಮನೆ,ಕಚೇರಿ ಮೇಲೆ ಐಟಿ ದಾಳಿ

ಮಹತ್ವದ ದಾಖಲೆಗಳಿಗಾಗಿ ಐಟಿ ಅಧಿಕಾರಿಗಳು ಶೋಧ ನಡೆಸಿದ್ದು, ಶೇಖ್ ಅಸ್ನೋಟಿಕರ್ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ. ಐಟಿ ಅಧಿಕಾರಿಗಳಿಗೆ ಪೊಲೀಸರು, ಫ್ಲೈಯಿಂಗ್​​ ಸ್ಕ್ವಾಡ್​​​ನವರು ಸಾಥ್ ನೀಡಿದ್ದಾರೆ.

ABOUT THE AUTHOR

...view details