ಕರ್ನಾಟಕ

karnataka

ETV Bharat / state

ತರಬೇತಿ ಮುಗಿಸಿ ಸೇವೆಗೆ ಹಾಜರಾದ ಐಪಿಎಸ್ ಅಧಿಕಾರಿ ನಿಖಿಲ್ ಬುಳ್ಳಾವರ್ - bhatkal

ಈ ಹಿಂದೆ ಭಟ್ಕಳದಲ್ಲಿ ಉತ್ತಮ ಆಡಳಿತ ನೀಡಿರುವ ಇವರ ಕಾರ್ಯವೈಖರಿಯನ್ನು ಜನತೆ ಕೊಂಡಾಡಿದ್ದರು. ಓಸಿ, ಇಸ್ಪೀಟ್, ಅಕ್ರಮ ಮರಳು ದಂಧೆ, ಕಲ್ಲು ಕ್ವಾರಿ ದಂಧೆ ನಡೆಸುತ್ತಿದ್ದವರ ಎದೆಯಲ್ಲಿ ಭಯ ಹುಟ್ಟಿಸಿದ್ದರು ಐಪಿಎಸ್​ ಅಧಿಕಾರಿ ನಿಖಿಲ್​ ಬುಳ್ಳಾವರ್​​.

ips officer nikhil bullavar
ಎಎಸ್ಪಿ ನಿಖೀಲ್ ಬಿ

By

Published : May 18, 2020, 9:09 PM IST

ಭಟ್ಕಳ (ಉತ್ತರ ಕನ್ನಡ):ತರಬೇತಿ ನಿಮಿತ್ತ ಹೈದರಾಬಾದ್‌ಗೆ ತೆರಳಿದ್ದ ಚಿತ್ರದುರ್ಗ ಮೂಲದ ಐಪಿಎಸ್‌ ಅಧಿಕಾರಿ ನಿಖಿಲ್‌ ಬುಳ್ಳಾವರ್‌ ಅವರು ಇದೀಗ ಭಟ್ಕಳಕ್ಕೆ ಆಗಮಿಸಿದ್ದು, ಅಧಿಕಾರ ಸ್ವೀಕರಿಸಿದ್ದಾರೆ.

ಹೈದರಾಬಾದ್‌ನಲ್ಲಿ ನಾಲ್ಕು ತಿಂಗಳ ತರಬೇತಿ ಅವಧಿ ಮುಗಿಸಿರುವ ಇವರು ಪುನಃ ಭಟ್ಕಳಕ್ಕೆ ಬಂದಿದ್ದು, ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.ಈ ಹಿಂದೆ ಭಟ್ಕಳದಲ್ಲಿ ಉತ್ತಮ ಆಡಳಿತ ನೀಡಿರುವ ಇವರ ಕಾರ್ಯವೈಖರಿಯನ್ನು ಜನತೆ ಕೊಂಡಾಡಿದ್ದರು. ಓಸಿ, ಇಸ್ಪೀಟ್, ಅಕ್ರಮ ಮರಳು ದಂಧೆ, ಕಲ್ಲು ಕ್ವಾರಿ ದಂಧೆ ನಡೆಸುತ್ತಿದ್ದವರ ಎದೆಯಲ್ಲಿ ಭಯ ಹುಟ್ಟಿಸಿದ್ದರು.

ಫೆಬ್ರವರಿ 9 ರಿಂದ ಇಲ್ಲಿಯತನಕ ಪ್ರೊಬೇಷನರಿ ಡಿವೈಎಸ್ಪಿ ಗೌತಮ ಕೆ.ಸಿ. ಅಧಿಕಾರ ಸ್ವೀಕರಿಸಿ ಮಹಾಮಾರಿ ಕೊರೊನಾ ನಿಯಂತ್ರಿಸುವಲ್ಲಿ ಶ್ರಮಿಸಿದ್ದರು.

ABOUT THE AUTHOR

...view details