ಭಟ್ಕಳ : ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಏಳು ಮಂದಿಯನ್ನು ತಾಲೂಕಿನ ಜಾಲಿ ರೋಡ್ ಬಳಿ ಪೊಲೀಸರು ಬಂಧಿಸಿದ್ದಾರೆ.
ಭಟ್ಕಳದಲ್ಲಿ ಐಪಿಎಲ್ ಬೆಟ್ಟಿಂಗ್ ದಂಧೆ: ಏಳು ಜನರ ಬಂಧನ - ಭಟ್ಕಳ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್
ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಏಳು ಮಂದಿ ಭಟ್ಕಳದಲ್ಲಿ ಬಂಧಿಸಲಾಗಿದೆ.
ಭಟ್ಕಳದಲ್ಲಿ ಐಪಿಎಲ್ ಬೆಟ್ಟಿಂಗ್ ದಂಧೆ
ಅಬು ಶೇಖ್ (43), ಜಾಪರ್ ಹುಸೈನ್ (42), ಅಬಿದ್ ಅಬಿದಿನ್ (33), ವಾಸೀಮ್ ಶಬ್ಬರ್ (43), ಮಹಮದಸಾಬಿ ಖಾದಿರ್ (32), ಸಾಹಿರ್ ಭಾಷಾ(39), ಮಹಮದ್ ಸಾಕಿಬ್ (43) ಬಂಧಿತ ಆರೋಪಿಗಳು. ಇವರಿಂದ 50,100 ರೂ. ನಗದು ಹಾಗೂ ಬೆಟ್ಟಿಂಗ್ಗೆ ಬಳಸುತಿದ್ದ ಮೊಬೈಲ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಭಟ್ಕಳ ಎಎಸ್ಪಿ ನಿಖಿಲ್ ನೇತೃತ್ವದಲ್ಲಿ ಡಿಸಿಐಬಿ ಇನ್ಸ್ಪೆಕ್ಟರ್ ನಿಶ್ಚಲ್ ಕುಮಾರ್ ಹಾಗೂ ತಂಡ ಕಾರ್ಯಾಚರಣೆ ನಡೆಸಿದೆ.