ಕರ್ನಾಟಕ

karnataka

ETV Bharat / state

ಕಾರವಾರದ ಕದಂಬ ನೌಕಾನೆಲೆಯಲ್ಲಿ ಯೋಗಾಭ್ಯಾಸ - ಅಂತರಾಷ್ಟ್ರೀಯ ಯೋಗ ದಿನ

ಕಾರವಾರದ ಅರಗಾದಲ್ಲಿರುವ ಕದಂಬ ನೌಕಾನೆಲೆಯಲ್ಲಿ ಏಳನೇ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ನೌಕಾನೆಲೆಯ ವಿವಿಧ ವಿಭಾಗಗಳಲ್ಲಿ ಒಟ್ಟು 2,500 ಸಿಬ್ಬಂದಿ, ಅಧಿಕಾರಿಗಳು ಭಾಗವಹಿಸಿ ಯೋಗಾಭ್ಯಾಸ ನಡೆಸಿದರು.

Karwar
ಕಾರವಾರದ ಕದಂಬ ನೌಕಾನೆಲೆಯಲ್ಲಿ ಯೋಗಾಭ್ಯಾಸ

By

Published : Jun 21, 2021, 2:43 PM IST

ಕಾರವಾರ: ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಕಾರವಾರದ ಅರಗಾದಲ್ಲಿರುವ ಕದಂಬ ನೌಕಾನೆಲೆಯಲ್ಲಿರುವ ಐಎನ್ಎಸ್ ವಿಕ್ರಮಾದಿತ್ಯದಲ್ಲಿ ನೌಕಾದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ಯೋಗಾಭ್ಯಾಸ ಮಾಡಿದರು.

ಕಾರವಾರದ ಕದಂಬ ನೌಕಾನೆಲೆಯಲ್ಲಿ ಯೋಗಾಭ್ಯಾಸ

ಏಳನೇ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಒಟ್ಟು 2,500 ಸಿಬ್ಬಂದಿ, ಅಧಿಕಾರಿಗಳು ಭಾಗವಹಿಸಿ ಯೋಗಾಭ್ಯಾಸ ನಡೆಸಿದರು. ಕದಂಬ ನೌಕಾನೆಲೆಯಲ್ಲಿ ಲಂಗರು ಹಾಕಿದ್ದ ಐಎನ್ಎಸ್ ವಿಕ್ರಮಾದಿತ್ಯ ಹಡಗಿನಲ್ಲಿಯೂ ಸಿಬ್ಬಂದಿ, ಅಧಿಕಾರಿಗಳು ಯೋಗದಲ್ಲಿ ಪಾಲ್ಗೊಂಡಿದ್ದರು.

ಕಾರವಾರದ ಕದಂಬ ನೌಕಾನೆಲೆಯಲ್ಲಿ ಯೋಗಾಭ್ಯಾಸ

ಕೊರೊನಾ ಮುಂಜಾಗ್ರತಾ ಕ್ರಮವಾಗಿ ಸಾಮಾಜಿಕ ಅಂತರ ಸ್ಯಾನಿಟೈಸರ್ ಬಳಕೆಯೊಂದಿಗೆ ಯೋಗ ಜಾಗೃತಿಯನ್ನು ಉತ್ತೇಜಿಸಲು, ಮನಸ್ಸು ಮತ್ತು ದೇಹದ ಏಕತೆ, ಚಿಂತನೆ ಮತ್ತು ಕ್ರಿಯೆಯನ್ನು ಸಾಕಾರಗೊಳಿಸಲು ನಮಸ್ತೆ ಯೋಗ ಆ್ಯಪ್ ಮೂಲಕವೂ ದೈನಂದಿನ ಯೋಗಾಭ್ಯಾಸ ಮಾಡಲಾಗುತ್ತಿದೆ ಎಂದು ನೌಕಾನೆಲೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಪ್ರಿಯಕರನೊಂದಿಗೆ ಸರಸಕ್ಕಾಗಿ ಪತಿಯ ಕೊಲೆ; ಸರ್ಚ್​ ಹಿಸ್ಟರಿ ಬಿಚ್ಚಿಟ್ಟಿತ್ತು ಮಾಯಾಂಗಿನಿಯ ನಾಟಕ !

ABOUT THE AUTHOR

...view details