ಕರ್ನಾಟಕ

karnataka

ETV Bharat / state

ಬೇರೆಯವರ ಎಟಿಎಂ ಕಾರ್ಡ್​ ಬಳಸಿ ಅಕ್ರಮ ಹಣ ಡ್ರಾ: ಅಂತಾರಾಜ್ಯ ವಂಚಕನ ಬಂಧನ - ಅಂತಾರಾಜ್ಯ ವಂಚಕನ ಬಂಧನ

ಅಂತಾರಾಜ್ಯ ವಂಚಕನೋರ್ವನನ್ನು ಬಂಧಿಸುವಲ್ಲಿ ಯಲ್ಲಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವೇಣುಗೋಪಾಲ ರೆಡ್ಡಿ (50) ಬಂಧಿತ ಆರೋಪಿ.

fraudsters arrested in Sirsi
ಅಂತಾರಾಜ್ಯ ವಂಚಕನ ಬಂಧನ

By

Published : Nov 5, 2020, 8:27 AM IST

ಶಿರಸಿ: ಒಂದು ವರ್ಷದ ಹಿಂದೆ ಯಲ್ಲಾಪುರದಲ್ಲಿ ಬೇರೆಯವರ ಎಟಿಎಂ ಕಾರ್ಡ್​ ಬಳಸಿ ಅಕ್ರಮವಾಗಿ ಹಣ ಡ್ರಾ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾರಾಜ್ಯ ವಂಚಕನೋರ್ವನನ್ನು ಬಂಧಿಸುವಲ್ಲಿ ಯಲ್ಲಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವೇಣುಗೋಪಾಲ ರೆಡ್ಡಿ (50) ಬಂಧಿತ ಆರೋಪಿ. ಈತನ ಮೇಲೆ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ ಎನ್ನಲಾಗ್ತಿದೆ. ಜಿಲ್ಲೆಯ ಹಳಿಯಾಳ, ಶಿರಸಿ ತಾಲೂಕುಗಳಲ್ಲಿ ಇದೇ ಮಾದರಿಯ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ತಿಳಿದು ಬಂದಿದೆ.‌

ಬಂಧಿತ ಆರೋಪಿಯಿಂದ 18,880 ರೂ.ನಗದು ಜಪ್ತಿ ಮಾಡಲಾಗಿದೆ. ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

ABOUT THE AUTHOR

...view details