ಕರ್ನಾಟಕ

karnataka

ETV Bharat / state

ತೆರೆದ ಬಾವಿ, ರಸ್ತೆ, ಮನೆಯೊಳಗೆಲ್ಲಾ ರಾಶಿ ರಾಶಿ ವಿಚಿತ್ರ ಹುಳುಗಳು: ಹೈರಾಣಾದ ಗ್ರಾಮಸ್ಥರು - ಕಾರವಾರ ತಾಲೂಕಿನ ಅಮದಳ್ಳಿ ಗ್ರಾಮ

ಕಾರವಾರ ತಾಲೂಕಿನ ಅಮದಳ್ಳಿ ಗ್ರಾಮದಲ್ಲಿ ಜನರು ನೆಮ್ಮದಿಯಿಂದ ಜೀವನ‌ ನಡೆಸುತ್ತಿದ್ದರು. ಆದರೆ, ಇದ್ದಕ್ಕಿದ್ದಂತೆ ವಿಚಿತ್ರ ಹುಳುಗಳ ಕಾಟ ಆರಂಭವಾಗಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Insects Troubles Amadalli Villagers
ಬಾವಿ, ರಸ್ತೆಗಳು, ಮನೆಗಳೊಳಗೆ ಪತ್ತೆಯಾದ ವಿಚಿತ್ರ ಹುಳುಗಳು

By

Published : May 31, 2022, 10:40 AM IST

ಕಾರವಾರ:ತೆರೆದ ಬಾವಿಗಳು, ರಸ್ತೆಗಳು, ಜಮೀನು ಹಾಗೂ ಮನೆಯ ಕಾಂಪೌಂಡ್‌.. ಹೀಗೆ ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತಿರುವ ಹುಳುಗಳು ಗ್ರಾಮಸ್ಥರ ನಿದ್ದೆಗೆಡಿಸಿವೆ. ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅಮದಳ್ಳಿ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಏಕಾಏಕಿಯಾಗಿ ವಿಚಿತ್ರ ಬಗೆಯ ಹುಳುಗಳು ಜನರನ್ನು ಕಾಡುತ್ತಿವೆ.


ಮೊದಲು ಖಾಲಿ ಪ್ರದೇಶಗಳಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದ ಹುಳಗಳು ದಿನಕಳೆದಂತೆ ಮನೆಯ ಆವರಣ ಹಾಗೂ ಕುಡಿಯುವ ನೀರಿನ ಬಾವಿಗಳಲ್ಲೂ ಸಾಕಷ್ಟು ಪ್ರಮಾಣದಲ್ಲಿ ಬಿದ್ದಿವೆ. ಇದರಿಂದಾಗಿ ಗ್ರಾಮಸ್ಥರು ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಜನರು ರೋಗ ಬಾಧೆಯ ಆತಂಕದಿಂದಲೂ ಬದುಕುತ್ತಿದ್ದಾರೆ.

ಗ್ರಾಮದಲ್ಲಿ ಈ ರೀತಿಯ ಹುಳುಗಳು ಕಾಣಿಸಿಕೊಂಡಿದ್ದು ಇದೇ ಮೊದಲು ಎನ್ನಲಾಗಿದೆ. ಯಾವ ಕಾರಣಕ್ಕೆ ಇಷ್ಟು ಪ್ರಮಾಣದಲ್ಲಿ ಹುಳುಗಳು ಬರುತ್ತಿವೆ ಎಂಬುದನ್ನು ತಿಳಿಯದೆ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಅಮದಳ್ಳಿ ಸುತ್ತಲಿನ ಹೊಸಗದ್ದೆ, ಮಾದೆವಾಡ, ಬಾಳೆರಾಶಿ ಸೇರಿದಂತೆ ಐದಾರು ಗ್ರಾಮಗಳಲ್ಲಿ ವಿಚಿತ್ರ ಹುಳುಗಳು ಕಾಣಿಸಿಕೊಂಡಿವೆ. ಯಾವುದೇ ರೀತಿಯ ಕೃಷಿ ಚಟುವಟಿಕೆಗಳೂ ನಡೆಯದ ಪ್ರದೇಶದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಹುಳುಗಳು ಕಂಡುಬರಲು ಕಾರಣವೇನು ಅನ್ನೋದು ತಿಳಿಯುತ್ತಿಲ್ಲ ಅಂತಾರೆ ಗ್ರಾಮಸ್ಥರು.

ಈಗಾಗಲೇ ಗ್ರಾಮ ಪಂಚಾಯತ್ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ತೊಂದರೆ ತಪ್ಪಿಸುವಂತೆ ಮನವಿ ಮಾಡಲಾಗಿದೆ. ಕೀಟನಾಶಕಗಳನ್ನು ಸಿಂಪಡಿಸಿದರಾದರೂ ಅಷ್ಟೊಂದು ಪ್ರಮಾಣದಲ್ಲಿ ನಿಯಂತ್ರಣವಾಗಿಲ್ಲ.

ಇದನ್ನೂ ಓದಿ:ಜಮೀನುಗಳಲ್ಲಿ ವ್ಯಾಪಿಸುತ್ತಿರುವ ಸೈನಿಕ ಹುಳುಗಳು: ಆತಂಕದಲ್ಲಿ ಉತ್ತರಕನ್ನಡ ಅನ್ನದಾತರು

ABOUT THE AUTHOR

...view details