ಕರ್ನಾಟಕ

karnataka

ETV Bharat / state

3 ದಿನಗಳಾದ್ರೂ ಸ್ನಾನ ಇಲ್ಲ, ಸುರಿವ ಮಳೆಯಲ್ಲೇ ನೆಲದ ಮೇಲೆ ನಿದ್ರೆ... ಕಾಳಿ ನದಿ ಸಂತ್ರಸ್ತರ ಬವಣೆ

ಕಾಳಿ ನದಿ ಪ್ರವಾಹದಿಂದ ತೊಂದರೆಗೊಳಗಾದ ಸಂತ್ರಸ್ತರನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ನೀರು, ಬಟ್ಟೆ, ಯಾವುದೇ ಸೌಕರ್ಯಗಳು ಇಲ್ಲದೇ ನಾವು ಪರದಾಡುವಂತಹ ಪರಿಸ್ಥಿತಿ ನಿಮಾರ್ಣವಾಗಿದೆ ಎಂದು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರ್.ವಿ ದೇಶಪಾಂಡೆ ಭೇಟಿ

By

Published : Aug 8, 2019, 3:45 AM IST

ಕಾರವಾರ: ಕಾಳಿ ನದಿ ಪ್ರವಾಹದಿಂದ ತೊಂದರೆಗೊಳಗಾದ ಸಂತ್ರಸ್ತರನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ನೀರು, ಬಟ್ಟೆ, ಯಾವುದೇ ಸೌಕರ್ಯಗಳು ಇಲ್ಲದೇ ನಾವು ಪರದಾಡುವಂತಹ ಪರಿಸ್ಥಿತಿ ನಿಮಾರ್ಣವಾಗಿದೆ ಎಂದು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ವಿರುದ್ಧ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಾದ್ಯಂತ ಒಟ್ಟು 49 ಗಂಜಿ ಕೇಂದ್ರಗಳನ್ನು ತೆರೆದಿದ್ದು, 5407 ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ಆದರೆ ಕಾರವಾರದ ಮಲ್ಲಾಪುರ, ಕದ್ರಾ, ಸಿದ್ದರ ವ್ಯಾಪ್ತಿಯಲ್ಲಿ ಸಂತ್ರಸ್ಥರಿಗೆ ಮೂರು ‌ದಿನದಿಂದ‌ ಸರಿಯಾಗಿ ಕುಡಿಯಲು ನೀರು, ಊಟ, ವಸತಿ, ಬಟ್ಟೆ ಸಿಗುತ್ತಿಲ್ಲ. ಸ್ನಾನ ಮಾಡಿ ಮೂರು ದಿನಗಳು ಕಳೆದಿದ್ದು, ಎಲ್ಲರೂ ಈ ಮಳೆಯಲ್ಲಿ ನೆಲದ ಮೇಲೆ‌ ಮಲಗುತ್ತಿದ್ದೇವೆ. ಕೆಪಿಸಿಎಲ್​ನಲ್ಲಿ ಮಳೆಯಾಗುತ್ತಿದೆ ಎಂಬ ಮುನ್ಸೂಚನೆ ಇದ್ದರೂ ಸ್ಥಳೀಯರಿಗೆ ಸರಿಯಾದ ಮಾಹಿತಿ ನೀಡಿಲ್ಲ. ಇದೀಗ ಕಾಟಾಚಾರಕ್ಕೆ ಗಂಜಿ ಕೇಂದ್ರ ತೆರೆಯಲಾಗಿದೆ ಎಂದು ಮಹಿಳೆಯೋರ್ವರು ಆಕ್ರೋಶ ವ್ಯಕ್ತಪಡಿಸಿದರು.

ಆರ್.ವಿ ದೇಶಪಾಂಡೆ ಭೇಟಿ:

ಇನ್ನು ಗಂಜಿ ಕೇಂದ್ರಕ್ಕೆ ಪ್ರಭಾರ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ ಭೇಟಿ ನೀಡುತ್ತಿದ್ದಾರೆ ಎಂಬ ಕಾರಣಕ್ಕೆ ಇಲ್ಲಿನ ಅಧಿಕಾರಿಗಳು ಮಕ್ಕಳಿಗೆ ಬಿಸ್ಕತ್​ ನೀಡಲು ಮುಂದಾಗಿದ್ದಾರೆ ಎಂದು ಆರೋಪಿಸಿ ನಿರಾಶ್ರಿತರು ಅಧಿಕಾರಿಗಳನ್ನು ತರಾಟೆ ತೆಗಡದುಕೊಂಡರು. ಈ ವೇಳೆ ನಿರಾಶ್ರಿತರಿಗೂ, ಅಧಿಕಾರಿಗಳಿಗೂ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಬಳಿಕ ಮಧ್ಯ ಪ್ರವೇಶಿಸಿದ ಪ್ರಭಾರ ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ ದೇಶಪಾಂಡೆ ಅಧಿಕಾರಿಗಳ ನಿರ್ಲಕ್ಷಕ್ಕೆ ಗರಂ ಆಗಿ, ತಮ್ಮ ಸ್ವಂತ ಖರ್ಚಿನಿಂದ ಗಂಜಿ ಕೇಂದ್ರಕ್ಕೆ ಮಹಿಳೆಯರಿಗೆ ಸೀರೆ, ಚಾಪೆ, ಪಂಚೆ ತರಿಸಿ ಕೊಡುವ ಭರವಸೆ ನೀಡಿದರು.

ABOUT THE AUTHOR

...view details