ಕರ್ನಾಟಕ

karnataka

ETV Bharat / state

ಅನರ್ಹ ಶಾಸಕರು ಬಿಜೆಪಿ ಮನೆ ಅಳಿಯಂದಿರು: ಕೆ.ಎಸ್ ಈಶ್ವರಪ್ಪ - Sirasa Sode Vadiraja Matt

ಅನರ್ಹರಿಂದಲೇ ಇಂದು ಬಿಜೆಪಿ ಅಧಿಕಾರದಲ್ಲಿದೆ. ಬಿಜೆಪಿ ಮನೆಯ 104ಮಕ್ಕಳ ಜೊತೆ 7-8 ಮಂದಿ ಅಳಿಯಂದಿರ ಜೊತೆ ಸೇರಿ ಬಹುಮತದ ಸರ್ಕಾರ ರಚಿಸಲಾಗುವುದು ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಕೆ.ಎಸ್ ಈಶ್ವರಪ್ಪ

By

Published : Sep 26, 2019, 5:16 PM IST

ಶಿರಸಿ:ಅನರ್ಹರು ಬಿಜೆಪಿ ಮನೆಯ ಅಳಿಯಂದಿರಾಗಿದ್ದಾರೆ.‌ ನಮ್ಮನ್ನ ನಂಬಿ ಬಂದೋರಿಗೆ ಮೋಸ ಮಾಡಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಸೋದೆ ವಾದಿರಾಜ ಮಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸೋದೆ ವಾದಿರಾಜ ಮಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅನರ್ಹರಿಂದಲೇ ಇಂದು ಬಿಜೆಪಿ ಅಧಿಕಾರದಲ್ಲಿದೆ. ಬಿಜೆಪಿ ಮನೆಯ 104ಮಕ್ಕಳ ಜೊತೆ 7-8 ಮಂದಿ ಅಳಿಯಂದಿರ ಜೊತೆ ಸೇರಿ ಬಹುಮತದ ಸರ್ಕಾರ ರಚಿಸಲಾಗುವುದು ಎಂದರು.

ಒಂದೊಮ್ಮೆ ಅನರ್ಹರಿಗೆ ಚುನಾವಣೆ ಎದುರಿಸಲು ಸಾಧ್ಯವಾಗದೇ ಹೋದಲ್ಲಿ ಅವರನ್ನು ವಿಶ್ವಾಸಕ್ಕೆ ತಗೊಂಡೇ ಮುಂದಿನ ತೀರ್ಮಾನ ಮಾಡುತ್ತೇವೆ. ಅನರ್ಹತೆ ಭಯದಲ್ಲಿರೋರಿಗೆ ಚುನಾವಣೆಗೆ ಸ್ಪರ್ಧಿಸಲು ಕೋರ್ಟ್ ಅವಕಾಶ ನೀಡೋ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಗೆಲ್ಲೋ ರಣಕಹಳೆ ಊದಿ ಊದಿ ನೆಗೆದು ಬಿದ್ದಿದ್ದಾರೆ. ರಾಜಕಾರಣದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದಾರೆ. ವಿರೋಧ ಪಕ್ಷದ ನಾಯಕನಾಗಲೂ ವಿಫಲವಾಗಿರೋ ಅವರು ರಾಜಕೀಯವಾಗಿ ಬದುಕಿದ್ದೇನೆ ಅನ್ನೋದನ್ನ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹಾಗಾಗೇ ಜಗಮೆಚ್ಚಿದ ನಾಯಕ ಮೋದಿಗೆ ಬಾಯಿಗೆ ಬಂದಂತೆ ಮಾತಾಡ್ತಾರೆ. ಆದರೆ ರಾಜಕೀಯದಲ್ಲಿ ಸಿದ್ದರಾಮಯ್ಯ ಆಟ ಮುಗೀತು ಎಂದು ವಂಗ್ಯವಾಡಿದ್ದಾರೆ.

ABOUT THE AUTHOR

...view details