ಕಾರವಾರ (ಉತ್ತರ ಕನ್ನಡ): ಅಪರೂಪದ ಇಂಡೊ ಪೆಸಿಫಿಕ್ ಹಂಪ್ ಬ್ಯಾಕ್ ಡಾಲ್ಫಿನ್ ಕಳೇಬರ ಕುಮಟಾ ತಾಲೂಕಿನ ಹೊಳನಗದ್ದೆ ಕಡಲತೀರದಲ್ಲಿ ಪತ್ತೆಯಾಗಿದೆ.
ಇಂಡೊ ಪೆಸಿಫಿಕ್ ಹಂಪ್ ಬ್ಯಾಕ್ ಡಾಲ್ಫಿನ್ ಕಳೇಬರ ಸುಮಾರು 2.55 ಮೀಟರ್ ಉದ್ದದ ಸುಮಾರು 250 ಕೆಜಿ ತೂಕದ ಇಂಡೊ ಪೆಸಿಫಿಕ್ ಹಂಪ್ ಬ್ಯಾಕ್ ಡಾಲ್ಫಿನ್ ಕಳೇಬರ ಇದಾಗಿದ್ದು, ಆಹಾರ ಹುಡುಕಿ ಬಂದ ಈ ಡಾಲ್ಫಿನ್ ಬೋಟ್ಗೆ ಡಿಕ್ಕಿ ಹೊಡೆದೋ ಅಥವಾ ಆಹಾರದಲ್ಲಿ ತೊಂದರೆಯಾಗಿಯೋ ಸತ್ತಿರಬಹುದು ಎಂದು ಊಹಿಸಲಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿ ಪ್ರವೀಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಓದಿ:ಒಳ ಉಡುಪಿನಲ್ಲಿ 33 ಲಕ್ಷ ರೂ. ಮೌಲ್ಯದ ಚಿನ್ನ ಸಾಗಾಟ: ಓರ್ವನ ಬಂಧನ
20 ರಿಂದ 25 ಮೀಟರ್ ಆಳ ಸಮುದ್ರದಲ್ಲಿ ವಾಸವಿರುವ ಈ ಡಾಲ್ಪಿನ್, 15 ರಿಂದ 20 ಸೆಕೆಂಡ್ ಸಮುದ್ರದಿಂದ ಮೇಲೆ ಬಂದು ಬಳಿಕ ನೀರಿನಲ್ಲಿ ಸಾಗಿ ಮೀನುಗಳನ್ನು ಶಿಕಾರಿ ಮಾಡುತ್ತದೆ. ಈ ಸಸ್ತನಿಯು 10 ರಿಂದ 12 ತಿಂಗಳುಗಳಲ್ಲಿ ಗರ್ಭಧಾರಣೆ ಮಾಡುತ್ತದೆ. ಮರಿಗಳು ಸ್ವಾವಲಂಬಿಯಾಗಿ ಸಮುದ್ರದಲ್ಲಿ ಬದುಕುವವರೆಗೂ ಅವುಗಳ ಪೋಷಣೆ ಮಾಡುವ ಇವು, ಬುದ್ಧಿವಂತ ಸಸ್ತನಿಯಾಗಿವೆ ಎಂದು ಅರಣ್ಯಾಧಿಕಾರಿ ಪ್ರವೀಣ ಮಾಹಿತಿ ನೀಡಿದ್ದಾರೆ.