ಕಾರವಾರ:ಸಮುದ್ರದಲ್ಲಿ ಅತಿ ವೇಗವಾಗಿ ಈಜುವ ಮೀನುಗಳಲ್ಲಿ ಒಂದಾದ ಇಂಡೋ ಪೆಸಿಫಿಕ್ ಬ್ಲ್ಯಾಕ್ ಮರ್ಲಿನ್ ಮೀನೊಂದು ಅಂಕೋಲಾ ತಾಲೂಕಿನ ಗಾಭೀತಕೇಣಿಯ ಮೀನುಗಾರರ ಬಲೆಗೆ ಬಿದ್ದಿದೆ.
ಅಂಕೋಲಾದ ಮೀನುಗಾರರ ಬಲೆಗೆ ಬಿತ್ತು 'ಇಂಡೋ ಪೆಸಿಫಿಕ್ ಬ್ಲ್ಯಾಕ್ ಮರ್ಲಿನ್' - ಬಿಲ್ ಫಿಶ್
ಅತಿದೊಡ್ಡ ಎಲುಬಿನ ಮೀನುಗಳಲ್ಲಿ ಒಂದಾಗಿರುವ, ಅತ್ಯಂತ ವೇಗವಾಗಿ ಸಮುದ್ರದಲ್ಲಿ ಈಜುವ ಇಂಡೋ ಪೆಸಿಫಿಕ್ ಬ್ಲ್ಯಾಕ್ ಮರ್ಲಿನ್ ಮೀನೊಂದು ಅಂಕೋಲಾ ತಾಲೂಕಿನ ಗಾಭೀತಕೇಣಿಯ ಮೀನುಗಾರರ ಬಲೆಗೆ ಬಿದ್ದಿದೆ.
'ಇಂಡೋ ಪೆಸಿಫಿಕ್ ಬ್ಲ್ಯಾಕ್ ಮರ್ಲಿನ್'
ಸಾಮಾನ್ಯವಾಗಿ ಬಿಲ್ ಫಿಶ್ ಎಂದು ಕರೆಯುವ ಚೂಪಾದ ಮುಖ, ಬೆನ್ನಮೇಲೆ ರೆಕ್ಕೆ ಹೊಂದಿರುವ ಸುಮಾರು ಐದು ಅಡಿ ಉದ್ದದ ಅಪರೂಪದ ಇಂಡೋ ಪೆಸಿಫಿಕ್ ಬ್ಲ್ಯಾಕ್ ಮರ್ಲಿನ್ ಮೀನು ಮೀನುಗಾರರಿಗೆ ಸಿಕ್ಕಿದೆ.
ಈ ಮೀನು ಭಾರತೀಯ ಮತ್ತು ಪೆಸಿಫಿಕ್ ಸಾಗರಗಳ ಉಷ್ಣವಲಯ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಕಂಡುಬರುತ್ತದೆ. ಗರಿಷ್ಠ 15 ಅಡಿ ಉದ್ದ ಹೊಂದಿ, 750 ಕೆಜಿವರೆಗೆ ತೂಕವಿರುತ್ತದೆ. ಅತಿದೊಡ್ಡ ಎಲುಬಿನ ಮೀನುಗಳಲ್ಲಿ ಇದು ಕೂಡಾ ಒಂದಾಗಿದ್ದು, ಅತ್ಯಂತ ವೇಗವಾಗಿ ಸಮುದ್ರದಲ್ಲಿ ಚಲಿಸುತ್ತದೆ.