ಕಾರವಾರ:ಕಾರವಾರ ತಾಲೂಕಿನ ಅಂಬಿಗವಾಡದ ಬಳಿ ಸಮುದ್ರದಿಂದ ನುಗ್ಗಿ ಬರುತ್ತಿರುವ ಅಲೆಗಳಿಂದಾಗಿ ಕಡಲತೀರದ ಅಂಚಿನಲ್ಲಿ ಹಾಕಿದ್ದ ಅಲೆ ತಡೆಗೋಡೆಗಳು ಕೊಚ್ಚಿಕೊಂಡು ಹೋಗುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ರು. ಬಳಿಕ ಪ್ರತಿಭಟನಾ ಸ್ಥಳಕ್ಕ ಭೇಟಿ ನೀಡಿದ ಬಂದರು ಇಲಾಖೆ ಅಧಿಕಾರಿಗಳು ಹಾಗೂ ತಹಶೀಲ್ದಾರ್ ಗ್ರಾಮಸ್ಥರ ಸಮಸ್ಯೆ ಆಲಿಸಿ, ಪರಿಹಾರ ಸೂಚಿಸುವುದಾಗಿ ಭರವಸೆ ನೀಡಿದ್ದಾರೆ.
ಕಾರವಾರದಲ್ಲಿ ಹೆಚ್ಚುತ್ತಿರುವ ಕಡಲ್ಕೊರೆತ.. ಸಮುದ್ರದ ಅಲೆಗೆ ಕೊಚ್ಚಿಹೋದ ತಡೆಗೋಡೆ!
ಕಾರವಾರ ತಾಲೂಕಿನ ಅಂಬಿಗವಾಡದ ಬಳಿ ಸಮುದ್ರದಿಂದ ನುಗ್ಗಿ ಬರುತ್ತಿರುವ ಅಲೆಗಳಿಂದಾಗಿ ಕಡಲತೀರದ ಅಂಚಿನಲ್ಲಿ ಹಾಕಿದ್ದ ಅಲೆ ತಡೆಗೋಡೆಗಳು ಕೊಚ್ಚಿಕೊಂಡು ಹೋಗುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ರು.
ಸಮುದ್ರ ಕೊರೆತ ಮಳೆಗಾಲ ಆರಂಭದಿಂದಲೂ ಆಗುತ್ತಿದ್ದರೂ ಯಾರೂ ಕೂಡ ಗಮನ ಹರಿಸುತ್ತಿಲ್ಲ. ಅಂಬಿಗವಾಡದಲ್ಲಿ ಇದೇ ಮೊದಲ ಭಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಲ ಕೊರೆತವಾಗುತ್ತಿದೆ. ಕೂಡಲೇ ಮುಂದಾಗುವ ಅಪಾಯವನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಕೊನೆಗೆ ಕಾರವಾರ ತಹಶೀಲ್ದಾರ್ ಆರ್‌ವಿ ಕಟ್ಟಿ, ಐಆರ್ಬಿ ಅಧಿಕಾರಿಗಳು ಹಾಗೂ ಬಂದರು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ರು.
ಬಳಿಕ ಐಆರ್ಬಿ ಕಂಪನಿಯಿಂದ 25 ಲೋಡ್ ಕಲ್ಲು ತರಿಸಿ ಕಡಲತೀರದುದ್ದಕ್ಕೂ ಹಾಕಲು ಕ್ರಮ ಕೈಗೊಳ್ಳಲಾಗುವುದು ಹಾಗೂ ಶಾಶ್ವತವಾಗಿ ಕಡಲ ಕೊರೆತ ತಪ್ಪಿಸಲು ಬಂದರು ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿದ್ದು, 65 ಲಕ್ಷ ವೆಚ್ಚದ ಯೋಜನಾ ವರದಿಯನ್ನೂ ಸಿದ್ದಪಡಿಸಿ, ಸರ್ಕಾರಕ್ಕೆ ಸಲ್ಲಿಸುವುದಾಗಿ ಭರವಸೆ ನೀಡಿದರು.