ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗುತ್ತಿದ್ದು, ಅಘನಾಶಿನಿ ಹಾಗೂ ಹೊನ್ನಾವರದ ಗುಂಡಬಾಳ ಹೊಳೆಗೆ ಯಥೇಚ್ಛವಾಗಿ ನೀರು ಹರಿದು ಬರುತ್ತಿರುವ ಕಾರಣ ನದಿಯಂಚಿನ ಮನೆಗಳಿಗೆ ನೆರೆ ಆವರಿಸಿದೆ.
ಉತ್ತರ ಕನ್ನಡದಲ್ಲಿ ಮಳೆ ಅಬ್ಬರ: ಕೆಲವೆಡೆ ಮನೆಗಳಿಗೆ ನುಗ್ಗಿ ಅವಾಂತರ
ಕಳೆದ ಎರಡು ದಿನಗಳಿಂದ ಕರಾವಳಿಯಲ್ಲಿ ಕೊಂಚ ಕಡಿಮೆಯಾಗಿದ್ದ ಮಳೆ ಇಂದು ಮತ್ತೆ ಅಬ್ಬರಿಸುತ್ತಿದೆ. ಘಟ್ಟದ ಮೇಲ್ಭಾಗದ ಶಿರಸಿ, ಸಿದ್ದಾಪುರ ಭಾಗಗಳಲ್ಲಿ ಮಳೆ ಜೋರಾಗಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.
ಕಳೆದ ಎರಡು ದಿನಗಳಿಂದ ಕರಾವಳಿಯಲ್ಲಿ ಕೊಂಚ ಕಡಿಮೆಯಾಗಿದ್ದ ಮಳೆ ಇಂದು ಮತ್ತೆ ಜೋರಾಗಿದೆ. ಮಾತ್ರವಲ್ಲದೆ ಘಟ್ಟದ ಮೇಲ್ಭಾಗದ ಶಿರಸಿ, ಸಿದ್ದಾಪುರ ಭಾಗಗಳಲ್ಲಿ ಮಳೆ ಅಬ್ಬರಿಸುತ್ತಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಪರಿಣಾಮ ಅಘನಾಶಿನಿ ನದಿ ತೀರದ ಹೆಗಡೆ, ದಿವಗಿ, ಕೂಜಳ್ಳಿ ಗ್ರಾಮದ ಕೆಲ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದ್ದು, ಇಲ್ಲಿನ ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಹೊನ್ನಾವರದ ಗುಂಡಬಾಳ ಹೊಳೆಯಲ್ಲಿ ಕೂಡ ಯಥೇಚ್ಛವಾಗಿ ನೀರು ಹರಿದುಬರುತ್ತಿದ್ದು, ಇಲ್ಲಿನ ಚಿಕ್ಕನಕೋಡ, ಸಾಲ್ಕೋಡು ಭಾಗಗಳಲ್ಲಿ ನದಿಯಂಚಿನ ಮನೆಗಳಿಗೆ ನೀರು ನುಗ್ಗತೊಡಗಿದೆ. ಅಲ್ಲದೇ ಹೊಳೆಯ ನೀರಿನ ಹರಿವು ಹೆಚ್ಚಿ ಇನ್ನಷ್ಟು ಗ್ರಾಮಗಳಿಗೆ ನೆರೆ ಆತಂಕ ಎದುರಾಗಿದೆ. ಹೊನ್ನಾವರ ತಾಲೂಕಿನ ಹಳದಿಪುರ ಗ್ರಾಮದ ಕರಿಮೂಲೆ ಬ್ರಿಡ್ಜ್ ಮುಳುಗಡೆಯಾಗಿದ್ದು, ಈರಪ್ಪನ ಹಿತ್ಲ, ಗೌಡಕುಳಿ ಗ್ರಾಮಗಳಲ್ಲಿ ನೆರೆ ಭೀತಿ ಎದುರಾಗಿದೆ.