ಕರ್ನಾಟಕ

karnataka

ETV Bharat / state

ಉತ್ತರ ಕನ್ನಡದ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ದಾಂಗುಡಿ: ಹೆಚ್ಚಿದ ಕೊರೊನಾ ಭೀತಿ - new year 2023

ಹೊಸ ವರ್ಷ 2023ಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ದಾಂಗುಡಿ ಇಡುತ್ತಿದ್ದಾರೆ. ಅದ್ರಲ್ಲೂ ಕಾರವಾರ ಕಡಲ ತೀರದಲ್ಲಿ ಜನಸಂದಣಿ ಹೆಚ್ಚುತ್ತಿದೆ.

Increased tourist
ಪ್ರವಾಸಿ ತಾಣಗಳಲ್ಲಿ ಮುಗಿಬಿದ್ದ ಪ್ರವಾಸಿಗರು

By

Published : Dec 27, 2022, 5:35 PM IST

ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಮುಗಿಬಿದ್ದ ಪ್ರವಾಸಿಗರು

ಕಾರವಾರ:ಹೊಸ ವರ್ಷವನ್ನು ಸಂಭ್ರಮದಿಂದ ಬರ ಮಾಡಿಕೊಳ್ಳಲು ಜನರು ಈಗಾಗಲೇ ಪ್ರವಾಸಿ ತಾಣಗಳತ್ತ ಲಗ್ಗೆಯಿಡುತ್ತಿದ್ದಾರೆ. ಅದರಂತೆ ಪ್ರವಾಸಿ ತಾಣಗಳ ಜಿಲ್ಲೆಯಾದ ಉತ್ತರ ಕನ್ನಡಕ್ಕೆ ರಾಜ್ಯ, ಹೊರ ರಾಜ್ಯಗಳ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದ್ದು, ಕಡಲ ತೀರಗಳಲ್ಲಿ ಈಜಾಡಿ ಎಂಜಾಯ್ ಮಾಡುತ್ತಿದ್ದಾರೆ. ಆದರೆ ದೇಶದಲ್ಲಿ ಕೊರೊನಾ ಕೇಸ್​ಗಳು ಹೆಚ್ಚುತ್ತಿದ್ದು, ರಾಜ್ಯದಲ್ಲೂ ಆತಂಕ ಮೂಡಿಸಿದೆ. ಇದರಿಂದಾಗಿ ಜನಸಾಮಾನ್ಯರು, ವ್ಯಾಪಾರಿಗಳು ಭಯ ಪಡುವಂತಾಗಿದೆ.

ರಜಾ-ಮಜಾದಲ್ಲೂ ಕೊರೊನಾ ಆತಂಕ: ಕರಾವಳಿ ಜಿಲ್ಲೆ ಉತ್ತರ ಕನ್ನಡದ ಕಡಲ ತೀರಗಳು ಇದೀಗ ಅಕ್ಷರಶಃ ಪ್ರವಾಸಿಗರಿಂದಲೇ ತುಂಬಿ ತುಳುಕುತ್ತಿವೆ. ಕ್ರಿಸ್​ಮಸ್​ಗೆಂದು ಸಾಲು ಸಾಲು ರಜೆ ಮತ್ತು ಹೊಸ ವರ್ಷಾಚರಣೆಯ ಖುಷಿಯಲ್ಲಿ ಎಂಜಾಯ್​ ಮಾಡಲೆಂದೇ ಕುಟುಂಬ ಸಮೇತರಾಗಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಜಿಲ್ಲೆಯ ಕಾರವಾರ, ಗೋಕರ್ಣ, ಹೊನ್ನಾವರ, ಮುರ್ಡೇಶ್ವರ ಸೇರಿದಂತೆ ಪ್ರವಾಸಿತಾಣಗಳಲ್ಲಿ ಮತ್ತು ಕಡಲ ತೀರಗಳಲ್ಲಿ ಜನ ತುಂಬಿ ತುಳುಕುತ್ತಿದ್ದಾರೆ.

ಈ ಬಾರಿ ಕರಾವಳಿ ಭಾಗಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಚಳಿಯ ವಾತಾವರಣವಿದೆ. ಹೀಗಿದ್ದರೂ ಜನರು ಸಮುದ್ರ ತೀರಕ್ಕೆ ಬಂದು ನೀರಿನಲ್ಲಿ ಈಜಾಡುತ್ತಿದ್ದಾರೆ. ಅದರಲ್ಲೂ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲ ತೀರ ಹೆದ್ದಾರಿಗೆ ಹೊಂದಿಕೊಂಡೇ ಇರುವುದರಿಂದ ಈ ಮಾರ್ಗವಾಗಿ ಗೋವಾ, ಮಂಗಳೂರು ಭಾಗಗಳಿಗೆ ತೆರಳುವ ಜನರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.

ಇದನ್ನೂ ಓದಿ:ಹೊಸ ವರ್ಷಾಚರಣೆಗೆ ಬಿಬಿಎಂಪಿ ಗೈಡ್‌ಲೈನ್ಸ್‌: ಈ ನಿಯಮಗಳು ನಿಮಗೆ ಗೊತ್ತಿರಲಿ..

ಬೇರೆ ಕಡೆಗಳಿಗೆ ಹೋಲಿಸಿದರೆ ಇಲ್ಲಿ ಜನದಟ್ಟಣೆ ಸ್ವಲ್ಪ ಕಡಿಮೆಯಿದ್ದು, ಕುಟುಂಬಸ್ಥರೊಂದಿಗೆ ಕಾಲ ಕಳೆಯಲು ಸೂಕ್ತ ವಾತಾವರಣವಿದೆ. ಹಾಗಾಗಿಯೇ ಜನರು ಇಲ್ಲಿಗೆ ಆಗಮಿಸಿ ಜಲಸಾಹಸ ಕ್ರೀಡೆಗಳನ್ನು ಆಡಿ ಸಖತ್​ ಖುಷಿ ಪಡುತ್ತಿದ್ದಾರೆ. ಆದರೆ ಈ ಖುಷಿಯನ್ನು ಕ್ಷಣಿಕ ಎಂದು ಸಾಬೀತುಪಡಿಸುವಂತೆ ಕೊರೊನಾ ಮತ್ತೆ ವಕ್ಕರಿಸಿದೆ. ರಜಾ ಮಜಾವನ್ನು ಕೋವಿಡ್​ ಕಿತ್ತುಕೊಳ್ಳಲು ರೆಡಿಯಾಗಿದೆ. ಈ ಬಗ್ಗೆ ಸರ್ಕಾರದಿಂದ ಯಾವುದೇ ಕಟ್ಟುನಿಟ್ಟಿನ ಕ್ರಮ ಜಾರಿಯಾಗದೇ ಇರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಜನರಲ್ಲಿ ಲಾಕ್​ಡೌನ್​ ಭೀತಿ: ದೇಶದ ವಿವಿಧ ಕಡೆಗಳಿಂದ ಪ್ರವಾಸಿಗರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಇದು ಜನರಲ್ಲಿ ಕೊರೊನಾ ಆತಂಕ ಮೂಡಿಸಿರುವುದಂತೂ ನಿಜ. ಈಗಾಗಲೇ ದೇಶದಲ್ಲಿ ಕೋವಿಡ್​ ಕೇಸ್ ವರದಿಯಾಗುತ್ತಿದ್ದು, ಪ್ರವಾಸಿಗರ ಆಗಮನ ಜಿಲ್ಲೆಯ ಜನರಲ್ಲಿ ಲಾಕ್​ಡೌನ್​ ಭೀತಿ ಹುಟ್ಟುಹಾಕಿದೆ. ಕಳೆದ ಬಾರಿಯಾದಂತೆ ಪುನಃ ಮನೆಯಲ್ಲಿಯೇ ಇರಬೇಕಾದ ಪರಿಸ್ಥಿತಿ ಬಂದೊದಗಲಿದೆಯೇ ಎಂಬ ಆತಂಕವಿದೆ.

ಅಲ್ಲದೇ ಕಳೆದ ವರ್ಷ ಹೊಸ ವರ್ಷಾಚರಣೆಯ ಸಮಯದಲ್ಲೇ ಲಾಕ್​ಡೌನ್​ ಉಂಟಾಗಿ ಹೋಟೆಲ್​, ರೆಸಾರ್ಟ್​ಗಳ ಮಾಲೀಕರು ಸಾಕಷ್ಟು ನಷ್ಟ ಅನುಭವಿಸುವಂತಾಗಿತ್ತು. ಈ ರೀತಿ ಮತ್ತೆ ಆಗಲೇಬಾರದು ಎಂದು ಸರ್ಕಾರಕ್ಕೆ ವ್ಯಾಪಾರಸ್ಥರು ಮನವಿ ಮಾಡಿದ್ದಾರೆ. ಅಲ್ಲದೇ ಕಡ್ಡಾಯ ಮಾಸ್ಕ್​ ಧರಿಸುವಿಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮುಂತಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪ್ರವಾಸಿಗರ ಓಡಾಟಕ್ಕೆ ಅನುವು ಮಾಡಿಕೊಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ವಿಶ್ವ ಪ್ರಸಿದ್ಧ ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಪಾರ್ಕಿಂಗ್, ಸ್ವಚ್ಛತೆ ಇಲ್ಲದೆ ಪ್ರವಾಸಿಗರ ಪರದಾಟ

ABOUT THE AUTHOR

...view details