ಕರ್ನಾಟಕ

karnataka

ETV Bharat / state

ಶಿರಸಿಯ ಬನವಾಸಿ ಕದಂಬೋತ್ಸವ ಉದ್ಘಾಟನಾ ಸಮಾರಂಭ - Department of Kannada and Culture

ಜಾನಪದ ಕಲಾ ತಂಡಗಳ ಮೆರವಣಿಗೆಯೊಂದಿಗೆ ಪ್ರಸಿದ್ಧ ಬನವಾಸಿ ಕದಂಬೋತ್ಸವ ಉದ್ಘಾಟನಾ ಸಮಾರಂಭ ವಿಜೃಂಭಣೆಯಿಂದ ನೆರವೇರಿತು‌.

Inauguration of Banavasi Kadambotsavam
ಶಿರಸಿಯ ಬನವಾಸಿ ಕದಂಬೋತ್ಸವ ಉದ್ಘಾಟನಾ ಸಮಾರಂಭ

By

Published : Feb 6, 2020, 5:06 PM IST

ಶಿರಸಿ: ನಾಡಿನ ಕಲೆ, ಸಂಸ್ಕೃತಿ ಬಿಂಬಿಸುವ ಜಾನಪದ ಕಲಾ ತಂಡಗಳ ಮೆರವಣಿಗೆಯೊಂದಿಗೆ ಪ್ರಸಿದ್ಧ ಬನವಾಸಿ ಕದಂಬೋತ್ಸವ (ಕದಂಬ ಜ್ಯೋತಿ) ಉದ್ಘಾಟನಾ ಸಮಾರಂಭ ಇಂದು ವಿಜೃಂಭಣೆಯಿಂದ ನೆರವೇರಿತು‌.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಬನವಾಸಿ ಅಭಿವೃದ್ಧಿ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಗುಡ್ನಾಪುರದ ಬಂಗಾರೇಶ್ವರ ದೇವಸ್ಥಾನದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ ಕದಂಬ ಜ್ಯೋತಿ ಉದ್ಘಾಟಿಸಿದರು.‌

ಕದಂಬೋತ್ಸವ ಉದ್ಘಾಟನಾ ಸಮಾರಂಭ

ಬಂಗಾರೇಶ್ವರ ದೇವಾಲಯದಿಂದ ಹೊರಟ ಕದಂಬ ಜ್ಯೋತಿ ಮೆರವಣಿಗೆ ಗುಡ್ನಾಪುರದ ವಿವಿಧೆಡೆ ಸಂಚರಿಸಿ ರಾಣಿ ನಿವಾಸ ತಲುಪಿತು.

ABOUT THE AUTHOR

...view details