ಕಾರವಾರ:ಗೋವಾದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮದ್ಯ ಸಹಿತ ಆರೋಪಿಯೋರ್ವನನ್ನು ವಶಕ್ಕೆ ಪಡೆದಿರುವ ಘಟನೆ ಕಾರವಾರದ ಮಾಜಾಳಿ ಚೆಕ್ ಪೋಸ್ಟ್ ಬಳಿ ನಡೆದಿದೆ.
ಅಕ್ರಮವಾಗಿ ಗೋವಾ ಮದ್ಯ ಸಾಗಾಟ: ಓರ್ವನ ಬಂಧನ - ಕಾರವಾರ
ಗೋವಾದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮದ್ಯ ಸಹಿತ ಆರೋಪಿಯೋರ್ವನನ್ನು ವಶಕ್ಕೆ ಪಡೆದಿರುವ ಘಟನೆ ಕಾರವಾರದ ಮಾಜಾಳಿ ಚೆಕ್ ಪೋಸ್ಟ್ ಬಳಿ ನಡೆದಿದೆ.
![ಅಕ್ರಮವಾಗಿ ಗೋವಾ ಮದ್ಯ ಸಾಗಾಟ: ಓರ್ವನ ಬಂಧನ](https://etvbharatimages.akamaized.net/etvbharat/prod-images/768-512-4678361-thumbnail-3x2-vid.jpg)
ಮದ್ಯ ಸಹಿತ ಓರ್ವನ ಬಂಧನ
ಕಾರವಾರ ಕಾಜುಭಾಗದ ಸಮೀರ್ ಕಿನ್ನರಕರ್ ಬಂಧಿತ ಆರೋಪಿ. ಗೋವಾದಿಂದ ಕಾರಿನಲ್ಲಿ ಮದ್ಯದ ಬಾಟಲ್ ತುಂಬಿಕೊಂಡು ಬರುತ್ತಿರುವಾಗ ಚೆಕ್ ಪೋಸ್ಟ್ ಬಳಿ ತಡೆದ ಅಬಕಾರಿ ಸಿಬ್ಬಂದಿ ಕಾರು ತಪಾಸಣೆ ನಡೆಸಿದರು. ಈ ವೇಳೆ ಗೋವಾ ಮದ್ಯ ದೊರೆತಿದ್ದು, ಕಾರು ಸಮೇತ 3 ಲಕ್ಷ 30 ಸಾವಿರ ರೂ. ಮಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ. ಅಬಕಾರಿ ಡಿಸಿ ವೈ.ಆರ್.ಮೋಹನ್ ನಿರ್ದೇಶನದ ಮೇರೆಗೆ ಅಬಕಾರಿ ಉಪ ನಿರೀಕ್ಷಕ ಜಿ.ಎಸ್. ಗುಂಡೂ ಕಾರ್ಯಾಚರಣೆ ನಡೆಸಿದರು.
ಇನ್ನು ಈ ಬಗ್ಗೆ ಅಬಕಾರಿ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.