ಕರ್ನಾಟಕ

karnataka

ETV Bharat / state

ಕಾರವಾರ: ವಾಷಿಂಗ್ ಮಷಿನ್ ನಡುವೆ 2,625ಲೀ ಅಕ್ರಮ ಮದ್ಯ ಸಾಗಾಟ ಪತ್ತೆ

ಗೋವಾದಿಂದ ಕೇರಳಕ್ಕೆ ವಾಷಿಂಗ್ ಮಷಿನ್ ಸಾಗಿಸುವ ಲಾರಿಯಲ್ಲಿ ಲಕ್ಷಾಂತರ ಮೌಲ್ಯದ ಸ್ಪಿರಿಟ್ ಪತ್ತೆಯಾಗಿದೆ.

spirit confiscated by officers
ಸ್ಪೀರಿಟ್ ವಶಕ್ಕೆ ಪಡೆದ ಅಧಿಕಾರಿಗಳು

By

Published : Mar 17, 2022, 9:30 PM IST

ಕಾರವಾರ: ವಾಷಿಂಗ್ ಮಷಿನ್ ತುಂಬಿದ ಲಾರಿಯಲ್ಲಿ ಅಕ್ರಮವಾಗಿ ಸ್ಪಿರಿಟ್ ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು, ಲಾರಿ ಹಾಗೂ ಸ್ಪಿರಿಟ್ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಘಟನೆ ಕಾರವಾರದ ಮಾಜಾಳಿ ಚೆಕ್ ಪೋಸ್ಟ್ ಬಳಿ ನಡೆದಿದೆ.


ಈ ದಾಳಿಯ ವೇಳೆ 1ಲಕ್ಷದ 80 ಸಾವಿರ ರೂ ಮೌಲ್ಯದ 2,625 ಲೀಟರ್ ಸ್ಪಿರಿಟ್ ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ:ಸಾಲ ಕಟ್ಟದ ಬಡ ಕುಟುಂಬದ ಮನೆ ಜಪ್ತಿಗೆ ಬಂದು ಮನೆಗೇ 'ಮರುಜೀವ' ತುಂಬಿದ ಬ್ಯಾಂಕ್​ ನೌಕರರು!

ಲಾರಿಯಲ್ಲಿ ಸುಮಾರು ಹತ್ತು ವಾಷಿಂಗ್ ಮಷಿನ್‌ಗಳಿದ್ದು, ಇದರ ಮದ್ಯದಲ್ಲಿ ಸ್ಪಿರಿಟ್ ತುಂಬಿದ ಕ್ಯಾನ್‌ಗಳನ್ನು ಇಡಲಾಗಿತ್ತು. ಈ ಲಾರಿ ಮಾಜಾಳಿಯ ಚೆಕ್‌ಪೋಸ್ಟ್‌ ಬಳಿ ಬರುತ್ತಿದ್ದಂತೆ ತಪಾಸಣೆ ನಡೆಸಿದ ಅಬಕಾರಿ ಸಿಬ್ಬಂದಿ ಅಕ್ರಮವನ್ನು ಬಯಲಿಗೆಳೆದಿದ್ದಾರೆ.

For All Latest Updates

TAGGED:

ABOUT THE AUTHOR

...view details