ಕಾರವಾರ: ಪರವಾನಗಿಗೆ ಇಲ್ಲದೇ ಅಕ್ರಮವಾಗಿ ಹಿಂಸಾತ್ಮಕವಾಗಿ ಸಾಗಣೆ ಮಾಡುತ್ತಿದ್ದ 37 ಕೋಣಗಳನ್ನು ರಕ್ಷಣೆ ಮಾಡಿರುವ ಘಟನೆ ಕುಮಟಾ ತಾಲೂಕಿನ ಹಿರೇಗುತ್ತಿ ಚೆಕ್ ಪೋಸ್ಟ್ ಬಳಿ ನಡೆದಿದೆ.
37 ಕೋಣಗಳ ಅಕ್ರಮ ಸಾಗಣೆ: ಐವರು ಆರೋಪಿಗಳ ಬಂಧನ!
ಕುಮಟಾ ತಾಲೂಕಿನ ಹಿರೇಗುತ್ತಿ ಚೆಕ್ ಪೋಸ್ಟ್ ಬಳಿ ಪರವಾನಗಿ ಇಲ್ಲದೇ ಅಕ್ರಮವಾಗಿ ಹಿಂಸಾತ್ಮಕವಾಗಿ ಸಾಗಣೆ ಮಾಡುತ್ತಿದ್ದ 37 ಕೋಣಗಳನ್ನು ರಕ್ಷಣೆ ಮಾಡಲಾಗಿದೆ.
ಕೋಣಗಳ ಅಕ್ರಮ ಸಾಗಾಟ
ಅಂಕೋಲಾದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಹರಿಯಾಣ ಮೂಲದ ಲಾರಿಯಲ್ಲಿ 37 ಕೋಣದ ಮರಿಗಳನ್ನು ನಿಲ್ಲಲೂ ಜಾಗವಿಲ್ಲದ ಸ್ಥಿತಿಯಲ್ಲಿ ಹಿಂಸಾತ್ಮಕವಾಗಿ ಸಾಗಣೆ ಮಾಡುತ್ತಿದ್ದರು. ಈ ಬಗ್ಗೆ ಚೆಕ್ ಪೋಸ್ಟ್ ಬಳಿ ತಡೆದು ಪರಿಶೀಲನೆ ನಡೆಸಿದಾಗ ಪರವಾನಗಿ ಇಲ್ಲದೇ ವಧೆ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಾಗಣೆ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಐವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಜೊತೆಗೆ 15 ಲಕ್ಷ ಮೌಲ್ಯದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.