ಕರ್ನಾಟಕ

karnataka

ETV Bharat / state

ಶ್ರೀಗಂಧ ಸಾಗಾಟ: ಇಬ್ಬರು ಮರಗಳ್ಳರ ಬಂಧನ - ಶಿರಸಿಯಲ್ಲಿ ಇಬ್ಬರು ಮರಗಳ್ಳರ ಬಂಧನ

ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ, ಇಬ್ಬರು ಮರಗಳ್ಳರನ್ನು ಜಿಲ್ಲೆಯ ಯಲ್ಲಾಪುರ ಅರಣ್ಯ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ  ಬಂಧಿಸಿದ್ದಾರೆ.  ಹಾಸನದ ಇಕ್ಬಾಲ್ ಹಸನ್ ಹಾಗೂ ಶಿರಾದ ದೇವರಾಜ ಬಂಧಿತ ಆರೋಪಿಗಳು.

Illegal sandalwood transfer
ಅಕ್ರಮ  ಶ್ರೀಗಂಧ ಸಾಗಾಟ: ಇಬ್ಬರು ಮರಗಳ್ಳರ ಬಂಧನ

By

Published : Jan 20, 2020, 11:59 AM IST

ಶಿರಸಿ: ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ, ಇಬ್ಬರು ಮರಗಳ್ಳರನ್ನು ಜಿಲ್ಲೆಯ ಯಲ್ಲಾಪುರ ಅರಣ್ಯ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಬಂಧಿಸಿದ್ದಾರೆ.

ಕಾರ್ಯಚರಣೆಯಲ್ಲಿ ಭಾಗಿಯಾದ ಯಲ್ಲಾಪುರ ಅರಣ್ಯ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ

ಹಾಸನದ ಇಕ್ಬಾಲ್ ಹಸನ್ (40) ಹಾಗೂ ಶಿರಾದ ದೇವರಾಜ (38) ಬಂಧಿತ ಆರೋಪಿಗಳು. ಯಲ್ಲಾಪುರ ವಿಭಾಗದ ಮಂಚಿಕೇರಿ ಅರಣ್ಯ ಪ್ರದೇಶಗಳಿಂದ ಅಕ್ರಮವಾಗಿ ಶ್ರೀಗಂಧದ ಮರದ ತುಂಡುಗಳನ್ನು ಟಾಟಾ ಕ್ಷೆನಾನ್ ವಾಹನದಲ್ಲಿ ತುಮಕೂರು ಕಡೆಗೆ ಸಾಗಿಸುತ್ತಿದ್ದರು. ಖಚಿತ ಮಾಹಿತಿ ಪಡೆದ ಯಲ್ಲಾಪುರ ವಿಭಾಗದ ಅರಣ್ಯ ಮತ್ತು ಸಿಬ್ಬಂದಿ ಮಾಲು ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ ಸುಮಾರು ರೂ 15 ಲಕ್ಷಕ್ಕೂ ಅಧಿಕ ಮೌಲ್ಯದ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ABOUT THE AUTHOR

...view details