ಕಾರವಾರ: ಪರವಾನಗಿ ಇಲ್ಲದೇ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ಎರಡು ಲಾರಿಗಳನ್ನು ವಶಕ್ಕೆ ಪಡೆದು, 25 ಸಾವಿರ ರೂ. ದಂಡ ಹಾಕಿದ ಘಟನೆ ನಗರದ ಬಿಲ್ಟ್ ಸರ್ಕಲ್ ಬಳಿ ನಡೆದಿದೆ.
ಅಕ್ರಮ ಮರಳು ಸಾಗಣೆ: ಎರಡು ಲಾರಿ ವಶ
ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ಎರಡು ಲಾರಿಗಳನ್ನು ವಶಕ್ಕೆ ಪಡೆದು, 25 ಸಾವಿರ ರೂ. ದಂಡ ಹಾಕಿದ ಘಟನೆ ನಗರದ ಬಿಲ್ಟ್ ಸರ್ಕಲ್ ಬಳಿ ನಡೆದಿದೆ.
ಅಂಕೋಲಾ ಕಡೆಯಿಂದ ಕಾರವಾರ ಕಡೆಗೆ ಟಿಪ್ಪರ್ ಮೂಲಕ ಅಕ್ರಮವಾಗಿ ಮರಳು ಸಾಗಣೆ ಮಾಡಲಾಗುತ್ತಿತ್ತು. ಈ ವೇಳೆ ಲಂಡನ್ ಬಿಡ್ಜ್ ಬಳಿ ರಾತ್ರಿ ಗುಸ್ತು ಕರ್ತವ್ಯದಲ್ಲಿದ್ದ ಸಂಚಾರಿ ಸಿಬ್ಬಂದಿ ವಾಹನ ತಪಾಸಣೆ ನಡೆಸಿದಾಗ ಪರವಾನಗಿ ಇಲ್ಲದೇ ಉಸುಕು ತುಂಬಿಕೊಂಡು ಹೋಗುತ್ತಿದ್ದು ಕಂಡುಬಂದಿದೆ. ತಕ್ಷಣ ಲಾರಿ ನಿಲ್ಲಿಸಿ ಚಾಲಕ ಮಂಜುನಾಥ ನಾಯ್ಕನನ್ನು ವಿಚಾರಣೆ ನಡೆಸಿದಾಗ ಉಸುಕು ಸಾಗಣೆಗೆ ಸಂಬಂಧಿಸಿದ ದಾಖಲೆಗಳು ಇಲ್ಲ ಎಂದು ಲಾರಿ ಚಾಲಕ ತಿಳಿಸಿದ್ದಾರೆ.
ಎರಡು ಲಾರಿಗೆ ಯಾವುದೇ ಜಿಪಿಎಸ್ ಉಪಕರಣ ಅಳವಡಿಸಿಲ್ಲ, ವಾಹನದಲ್ಲಿದ್ದ ಮರಳು ಬಗ್ಗೆ ನಿಗದಿತ ತೂಕ ಮಾಹಿತಿ ಇರಲಿಲ್ಲ. ಉಸುಕು ಯಾವ ಸ್ಥಳದಿಂದ ಯಾವ ಸ್ಥಳಕ್ಕೆ ಸಾಗಣೆ ಮಾಡಲಾಗಿದೆ ಎಂಬ ಬಗ್ಗೆ ಸರಿಯಾದ ಮಾಹಿತಿ ಕೂಡ ನೀಡಿಲ್ಲ. ಈ ಕಾರಣದಿಂದ ಉಸುಕು ತುಂಬಿರುವ ಎರಡು ಲಾರಿಯನ್ನು ಕಾರವಾರ ತಹಶೀಲ್ದಾರರಿಗೆ ಹಸ್ತಾಂತರಿಸಿ 25 ಸಾವಿರ ರೂ. ದಂಡ ಹಾಕಿ ಮರಳು ಜಪ್ತಿ ಮಾಡಲಾಗಿದೆ.