ಶಿರಸಿ: ತಾಲೂಕಿನ ಕೆಳಗಿನಕೇರಿ ನರಸೆಬೈಲ್‌ನಲ್ಲಿ ಅಕ್ರಮವಾಗಿ ಬೆಳೆದ ಗಾಂಜಾ ಗಿಡಗಳನ್ನು ಬುಧವಾರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಕ್ರಮ ಗಾಂಜಾ ಬೆಳೆ: ಒಬ್ಬನ ಬಂಧನ
ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಬೆಳೆ ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಗೋಪಾಲ ವೆಂಕಟ ಸಿದ್ದಿ (55) ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಮಾರಾಟದ ಉದ್ದೇಶದಿಂದ ಆರೋಪಿ ತನ್ನ ಜಮೀನಿನಲ್ಲಿ ಬೆಳೆಸಿದ ಐದು ಹಸಿ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ.
ಅಂದಾಜು 2.25 ಲಕ್ಷ ಮೌಲ್ಯದ 15.32 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಕಾರವಾರ ಡಿಸಿಐಬಿ ಪೊಲೀಸ್ ನಿರೀಕ್ಷಕ ನಿಶ್ಚಲಕುಮಾರ್, ಸದಾನಂದ ಸಾವಂತ, ಗಣೇಶ ನಾಯ್ಕ, ರುದ್ರೇಶ ಮೇತ್ರಾಣಿ, ಗ್ರಾಮೀಣ ಠಾಣೆ ಪಿಎಸ್‌ಐ ನಂಜಾ ನಾಯ್ಕ, ಮಂಜುನಾಥ ಕೆಂಚರೆಡ್ಡಿ, ದಯಾನಂದ ಹುಂಡೇಕರ, ಸುನೀಲ್ ಹಡಲಗೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.