ಶಿರಸಿ: ಅಕ್ರಮವಾಗಿ ವಾಹನವೊಂದರಲ್ಲಿ ಜಾನುವಾರಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಶಿರಸಿ ಪೊಲೀಸರು ಬಂಧಿಸಿ, ಜಾನುವಾರುಗಳನ್ನು ರಕ್ಷಿಸಿದ ಘಟನೆ ನಗರದ ಯಲ್ಲಾಪುರ ನಾಕಾ ಸರ್ಕಲ್ ಬಳಿ ನಡೆದಿದೆ.
ಅಕ್ರಮವಾಗಿ ಜಾನುವಾರು ಸಾಗಾಟ: ಶಿರಸಿಯಲ್ಲಿ ಇಬ್ಬರ ಬಂಧನ
ಅಕ್ರಮವಾಗಿ ವಾಹನವೊಂದರಲ್ಲಿ ಜಾನುವಾರಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ.
ಅಕ್ರಮ ಜಾನುವಾರು ಸಾಗಾಟ: ಶಿರಸಿಯಲ್ಲಿ ಇಬ್ಬರ ಬಂಧನ
ಹಾನಗಲ್ ತಾಲೂಕಿನ ಮೂಡುರಿನ ಬಸವರಾಜ ಗುತ್ಯಪ್ಪ ಕೊಪ್ಪದ (23) ಹಾಗೂ ಹನುಮಂತ ಸುರೇಶಪ್ಪ ಗಡ್ಡದ ಪ್ರಾಯ (23) ಬಂಧಿತ ಆರೋಪಿಗಳು. ಇವರು ಸಂತೆ ಹೊಸೂರಿನ ಅಲ್ಲಾಭಕ್ಷ ಲಾಲಸಾಬ್ ನದಾಫ್ ಹೇಳಿದಂತೆ ಮಾರುತಿ ಸುಜುಕಿ ಕಂಪನಿಯ ಸೂಪರ್ ಕ್ಯಾರಿ ಟರ್ಬೋ ವಾಹನದಲ್ಲಿ ( ಕೆಎ-27 ಸಿ- 1659) ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದಾಗ ಬಂಧಿಸಲಾಗಿದೆ.
ಬಂಧಿತರಿಂದ 3 ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ. ಈ ಸಂಬಂಧ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.