ಕಾರವಾರ:ಅಕ್ರಮ ಗೋವಾ ಮದ್ಯವನ್ನು ಮನೆಯಲ್ಲಿಟ್ಟು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಅಬಕಾರಿ ಸಿಬ್ಬಂದಿ ಮದ್ಯ ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿರುವ ಘಟನೆ ಕಾರವಾರ ತಾಲೂಕಿನ ಸುಂಕೇರಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ದೊಡ್ಡ ಮಶ್ಜಿದಿಯ ಹತ್ತಿರದ ನಿವಾಸಿಯಾದ ಜಯಪ್ರಕಾಶ್ ಜೋಷಿ ಎಂಬುವರ ಮನೆಯ ಮೇಲೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು, 16 ಸಾವಿರ ರೂ. ಮೌಲ್ಯದ 39 ಲೀಟರ್ ಗೋವಾ ಮದ್ಯ ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.