ಭಟ್ಕಳ: ಹಣ್ಣಿನ ವಾಹದಲ್ಲಿ ಅಕ್ರಮವಾಗಿ 500 ಕೆ.ಜಿಯಷ್ಟು ಗೋ ಮಾಂಸ ಸಾಗಿಸುತ್ತಿದ್ದ ವೇಳೆ, ಶಿರಾಲಿ ಚೆಕ್ ಪೋಸ್ಟ್ ಬಳಿ ವಾಹನ ತಡೆದ ತನಿಖಾ ಸಿಬ್ಬಂದಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮೌಲಾಲಿ ಭಾಷಾಸಾಬ್, ಜಿಲಾನಿ ಗೌಸ್ ಹಾಗೂ ಮುಜಾಫರ್ ಬಂಧಿತ ಆರೋಪಿಗಳಾಗಿದ್ದಾರೆ.
ಭಟ್ಕಳದಲ್ಲಿ ಅಕ್ರಮ ಗೋ ಮಾಂಸ ಸಾಗಣೆ: ಮೂವರ ಬಂಧನ - ಅಕ್ರಮ ಗೋ ಮಾಂಸ ಸಾಗಾಟ
ವಾಹನ ಹಿಂಬದಿಯಲ್ಲಿ ಸುಮಾರು 1 ಲಕ್ಷ ರೂ. ಮೌಲ್ಯದ 500 ಕೆ.ಜಿ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ವಾಹನದಲ್ಲಿ ಸಾಗಿಸಲಾಗುತ್ತಿತ್ತು. ಯಾವುದೇ ಪರವಾನಿಗೆ ಪಡೆಯದೇ ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ವಾಹನದಲ್ಲಿ ತುಂಬಿ ಸಾಗಿಸುತ್ತಿದ್ದರು ಎನ್ನಲಾಗ್ತಿದೆ.

ಮೂವರ ಬಂಧನ

ಕೃತ್ಯಕ್ಕೆ ಬಳಸಲಾದ ವಾಹನ ಹಾಗೂ ಮಾಂಸವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಗ್ರಾಮೀಣ ಠಾಣಾ ಎಎಸ್ಐ ಕೃಷ್ಣಾನಂದ ನಾಯ್ಕ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.