ಭಟ್ಕಳ (ಉತ್ತರ ಕನ್ನಡ): ಅಕ್ರಮವಾಗಿ ಬುಲೆರೋ ವಾಹನದಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ನಗರ ಠಾಣೆ ಪೊಲೀಸರು ಬಂಧಿಸಿ, ವಶಕ್ಕೆ ಪಡೆದ ಘಟನೆ ಪಟ್ಟಣದ ಕೋಕ್ತಿ ನಗರದಲ್ಲಿ ಭಾನುವಾರ ನಡೆದಿದೆ.
ಜಾನುವಾರುಗಳ ಅಕ್ರಮ ಸಾಗಾಟ: ನಾಲ್ವರು ಆರೋಪಿಗಳ ಬಂಧನ - Illegal cattle trafficking
ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ. ವಾಹನದಲ್ಲಿ 1.50 ಲಕ್ಷ ರೂ. ಮೌಲ್ಯದ ಅಕ್ಕಿ ಮೂಟೆ, 60 ಸಾವಿರ ರೂ. ಮೌಲ್ಯದ ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ಪಟ್ಟಣದ ಜಾಗಟೆಬೈಲ್ ಹನೀಫಾಬಾದ ನಿವಾಸಿ ಮಹ್ಮದ್ ಮುಸಾಧಿಕ್, ಅಜಾದ ರೋಡ್ ಮಗ್ದುಂ ಕಾಲೋನಿ ನಿವಾಸಿ ಮಹ್ಮದ್ ಸವೂದ್, ಜಾಮಿಯಾಬಾದ ನಿವಾಸಿ ಸದ್ದಾಂ ಹುಸೇನ್, ಹೇರಿಕೇರಿ ನಿವಾಸಿ ರಫಿಕ್ ಮುಸ್ತಾಫ ಬಂಧಿತರು.
ಇವರು ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಕಳುವು ಮಾಡಿಕೊಂಡು ಕೋಕ್ತಿನಗರಕ್ಕೆ ತರುವಾಗ ನಗರ ಠಾಣೆಯ ಪೊಲೀಸರು ಆರೋಪಿ ಸಮೇತ ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ. ವಾಹನದಲ್ಲಿದ್ದ 1.50 ಲಕ್ಷ ರೂ. ಮೌಲ್ಯದ ಅಕ್ಕಿ ಮೂಟೆ, 60 ಸಾವಿರ ರೂ. ಮೌಲ್ಯದ ಜಾನುವಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಎಎಸ್‍ಐ ನಾರಾಯಣ ಜಿ. ಬೊಯರ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.