ಭಟ್ಕಳ: ಶಿರಾಲಿ ಪೊಲೀಸ್ ಚೆಕ್ ಪೋಸ್ಟ್ ಬಳಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ವೇಳೆ ಹಣ್ಣು ತುಂಬಿದ ವಾಹನದಲ್ಲಿ ಅಕ್ರಮವಾಗಿ 500 ಕೆಜಿ ದನದ ಮಾಂಸ ಸಾಗಾಟ ಮಾಡುತ್ತಿದ್ದದ್ದು ಪತ್ತೆಯಾಗಿದೆ.
ಅಕ್ರಮವಾಗಿ ದನದ ಮಾಂಸ ಸಾಗಾಟ: ಓರ್ವನ ಬಂಧನ, ಇನ್ನೋರ್ವ ಪರಾರಿ - illegal beef trafficking
ಶಿರಕುಳಿಹೊಂಡಾ ನಿವಾಸಿ ಅರ್ಶದ ಹುಸೇನ್ ಮುಸ್ತಾಖ ಅಹ್ಮದ್ ಫರಾಸ್(32) ಹಾಗೂ ಇಸ್ಮಾಯಿಲ್ ಮಹ್ಮದ್ ಹುಸೇನ್ (47) ಎಂಬುವರು ಅಕ್ರಮವಾಗಿ 500 ಕೆಜಿ ದನದ ಮಾಂಸ ಸಾಗಾಟ ಮಾಡುತ್ತಿದ್ದಾಗ ಶಿರಾಲಿ ಪೊಲೀಸ್ ಚೆಕ್ ಪೋಸ್ಟ್ ಬಳಿ ಸಿಕ್ಕಿಬಿದ್ದಿದ್ದಾರೆ.
ಇಲ್ಲಿನ ಶಿರಕುಳಿಹೊಂಡಾ ನಿವಾಸಿ ಅರ್ಶದ ಹುಸೇನ್ ಮುಸ್ತಾಖ ಅಹ್ಮದ್ ಫರಾಸ್(32) ಹಾಗೂ ಇಸ್ಮಾಯಿಲ್ ಮಹ್ಮದ್ ಹುಸೇನ್ (47) ಆರೋಪಿಗಳೆಂದು ತಿಳಿದುಬಂದಿದೆ. ಶಿರಾಲಿ ಪೊಲೀಸ್ ಚೆಕ್ ಪೋಸ್ಟ್ನಲ್ಲಿ ಮಹೀಂದ್ರಾ ಬೊಲೆರೊ ಪಿಕ್ಅಪ್ ವಾಹನದ ಹಿಂಬದಿಯಲ್ಲಿ ಸುಮಾರು 1 ಲಕ್ಷ ರೂ. ಮೌಲ್ಯದ 500 ಕೆಜಿ ದನದ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
ಯಾವುದೇ ಪರವಾನಗಿ ಪಡೆಯದೆ ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ವಾಹನದಲ್ಲಿ ತುಂಬಿ ಸಾಗಾಟ ಮಾಡುತ್ತಿದ್ದ ವೇಳೆ ಶಿರಾಲಿ ಪೊಲೀಸ್ ಚೆಕ್ ಪೋಸ್ಟ್ನಲ್ಲಿ ವಾಹನ ಸಮೇತ ಸಿಕ್ಕಿಬಿದ್ದಿದ್ದಾರೆ. ಈ ಪೈಕಿ ಆರೋಪಿ ಅರ್ಶದ ಹುಸೇನ್ ಮುಸ್ತಾಖ ಅಹ್ಮದ್ ಫರಾಸ್ ಪೊಲೀಸರ ವಶವಾಗಿದ್ದು, ಇನ್ನೋರ್ವ ಆರೋಪಿ ಇಸ್ಮಾಯಿಲ್ ಮಹ್ಮದ್ ಹುಸೇನ್ ಪರಾರಿಯಾಗಿದ್ದಾನೆ. ದನದ ಮಾಂಸ ಸಾಗಾಟ ಮಾಡುತ್ತಿದ್ದ ವಾಹನ ಹಾಗೂ ಹಣ್ಣು ತುಂಬುವ ಖಾಲಿ ಟ್ರೇ, ದನದ ಮಾಂಸವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆ ಎಎಸ್ಐ ಮಂಜುನಾಥ ಬಿ.ಗೌಡರ ದೂರು ನೀಡಿದ್ದು, ಠಾಣಾ ಪಿಎಸ್ಐ ಹೆಚ್.ಓಂಕಾರಪ್ಪ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಪರಾರಿಯಾಗಿರುವ ಆರೋಪಿಗಾಗಿ ಶೋಧ ಕಾರ್ಯ ಮುಂದುವರೆದಿದೆ.