ಕರ್ನಾಟಕ

karnataka

ETV Bharat / state

ಭಟ್ಕಳದಲ್ಲಿ ಕೊರೊನಾ ಜಾಗೃತಿ ಪರಿಶೀಲಿಸಿದ ಐಜಿಪಿ ದೇವ್‍ ಜ್ಯೋತಿ - ಲಾಕ್‍ಡೌನ್ ಆದೇಶ

ಪಶ್ಷಿಮ ವಲಯ ಐಜಿಪಿ ದೇವ್‍ಜ್ಯೋತಿ, ಭಟ್ಕಳಕ್ಕೆ ಭೇಟಿ ನೀಡಿ ಲಾಕ್‍ಡೌನ್ ಆದ ನಂತರದಿಂದ ಇಲ್ಲಿನ ತನಕ ಇಲಾಖೆಯಿಂದ ಕೈಗೊಂಡ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು.

IGP Devjyothi reviewed by Corona Awareness in Bhatkal
ಭಟ್ಕಳದಲ್ಲಿ ಕೊರೊನಾ ಜಾಗೃತಿ ಪರಿಶೀಲಿಸಿದ ಐಜಿಪಿ ದೇವ್‍ಜ್ಯೋತಿ

By

Published : Apr 8, 2020, 10:14 PM IST

ಉತ್ತರಕನ್ನಡ:ಭಟ್ಕಳ ತಾಲೂಕಿನಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಪಶ್ಷಿಮ ವಲಯ ಐಜಿಪಿ ದೇವ್‍ಜ್ಯೋತಿ, ಭಟ್ಕಳಕ್ಕೆ ಭೇಟಿ ನೀಡಿ ಲಾಕ್‍ಡೌನ್ ಆದ ನಂತರದಿಂದ ಇಲ್ಲಿನ ತನಕ ಇಲಾಖೆಯಿಂದ ಕೈಗೊಂಡ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು.

ಭಟ್ಕಳದಲ್ಲಿ ಕೊರೊನಾ ಜಾಗೃತಿ ಪರಿಶೀಲಿಸಿದ ಐಜಿಪಿ ದೇವ್‍ಜ್ಯೋತಿ

ಮಂಗಳೂರಿನಿಂದ ನೇರವಾಗಿ ಭಟ್ಕಳಕ್ಕೆ ಆಗಮಿಸಿದ್ದ ಅವರು,ಭಟ್ಕಳ ನಗರದಲ್ಲಿ ಒಂದು ಸುತ್ತು ಹಾಕಿದ್ರು. ನಂತರ ಭಟ್ಕಳ ತಾಲೂಕು ಆಸ್ಪತ್ರೆ ಸೇರಿದಂತೆ ಅಂಜುಮನ್ ಹಾಸ್ಟೆಲ್​ನಲ್ಲಿ ಹೋಂ ಕ್ವಾರಂಟೈನಲ್ಲಿ ಇಟ್ಟಿರುವ ಸ್ಥಳದಲಲ್ಲಿ ತೆಗೆದುಕೊಂಡಿರುವ ಸುರಕ್ಷತಾ ಕ್ರಮಗಳನ್ನ ಪರಿಶೀಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದೆ. ಏ14ರ ನಂತರವೂ ಕೂಡಾ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ ಎನ್ನುವುದರ ಮೇಲೆ ತಮ್ಮ ಇಲಾಖೆ ಕಾರ್ಯಾಚರಣೆ ನಡೆಸಲಿದೆ. ಏ.14ರ ನಂತರ ಬಂದೋಬಸ್ತ್​ ಯಾವ ರೀತಿಯಾಗಿರಲಿದೆ ಎಂದು ಹೇಳಲು ಸಾಧ್ಯವಿಲ್ಲ. ಬೇರೆ ಬೇರೆ ಕಡೆಯಿದ್ದವರು ಅವರವರ ಸ್ಥಾನ ಸೇರಲು ಅವಕಾಶ ನೀಡುವ ಕುರಿತೂ ಹೇಳಲು ಸಾಧ್ಯವಿಲ್ಲ ಎಂದರು.

ಭಟ್ಕಳದಲ್ಲಿ ವಿಷೇಶವಾಗೇನೂ ಇಲ್ಲ. ಆದರೆ ಯಾವುದೇ ವ್ಯಕ್ತಿಯ ಪೂರ್ವಾಪರವನ್ನು ವಿಚಾರಿಸಿ ಸಂಶಯಿತರಾಗಿದ್ದಲ್ಲಿ ಅವರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ. ಭಟ್ಕಳದಿಂದ ಮಾತ್ರವಲ್ಲ, ಎಲ್ಲಾ ಜಿಲ್ಲೆಗಳಲ್ಲಿಯೂ ಕೂಡಾ ಗಡಿಯನ್ನು ಬಂದ್ ಮಾಡಲಾಗಿದೆ. ಕಳೆದ ಎರಡು ತಿಂಗಳ ಹಿಂದೆ ಜನರಲ್ಲಿ ಕೋವಿಡ್-19 ಕುರಿತು ಜಾಗೃತಿ ಇರಲಿಲ್ಲ. ಆದರೆ ಈಗ ಜನರಲ್ಲಿಯೂ ಕೂಡಾ ಜಾಗೃತಿ ಮೂಡಿದೆ. ಪ್ರತಿಯೊಬ್ಬರು ಕೂಡಾ ತಾವಾಗಿಯೇ ಬಂದು ಪರೀಕ್ಷೆಗೊಳಪಡುತ್ತಿದ್ದಾರೆ. ಯಾವುದೇ ರೀತಿಯ ಮಾಹಿತಿ ಬಂದರೂ ಕೂಡಾ ನಾವು ತಕ್ಷಣ ಕಾರ್ಯಪ್ರವೃತ್ತರಾಗುತ್ತೇವೆ. ಭಟ್ಕಳದಲ್ಲಿ ಪರೀಕ್ಷೆಗೆ ಕಳುಹಿಸಿದ ಮಾದರಿಗಳಲ್ಲಿ ಅನೇಕರದ್ದು ನೆಗೆಟಿವ್ ಬಂದಿರುವುದು ಒಂದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ABOUT THE AUTHOR

...view details