ಕರ್ನಾಟಕ

karnataka

ETV Bharat / state

ಬಿಜೆಪಿ ಜೊತೆ ಜೆಡಿಎಸ್ ಬಂದಲ್ಲಿ ಸೇರಿಸಿಕೊಳ್ಳುತ್ತೇವೆ : ಸಚಿವ ಶಿವರಾಮ್ ಹೆಬ್ಬಾರ್ - ಬಿಜೆಪಿ ಜೊತೆ ಜೆಡಿಎಸ್ ಬಂದಲ್ಲಿ ಸೇರಿಸಿಕೊಳ್ಳುತ್ತೇವೆ

ಕಳೆದ ಕೆಲ ದಿನಗಳಿಂದ ಬಿಜೆಪಿ- ಜೆಡಿಎಸ್​ ಮೈತ್ರಿ ಕುರಿತಂತೆ ಸುದ್ದಿಗಳು ಕೇಳಿ ಬರುತ್ತಿವೆ. ಇದರ ನಡುವೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು ನಮ್ಮ ಸೈದ್ದಾಂತಿಕ ಹಿನ್ನೆಲೆಯನ್ನು ಒಪ್ಪಿ ಜೆಡಿಎಸ್ ,ಬಿಜೆಪಿ ಜೊತೆ ಬಂದರೆ ಖಂಡಿತಾ ಸೇರಿಸಿಕೊಳ್ಳುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

ಶಿವರಾಮ್ ಹೆಬ್ಬಾರ್
Shivaram Hebbar

By

Published : Dec 27, 2020, 1:14 PM IST

ಶಿರಸಿ : ನಮ್ಮ ಸೈದ್ದಾಂತಿಕ ಹಿನ್ನೆಲೆಯನ್ನು ಒಪ್ಪಿ ಜೆಡಿಎಸ್ ಬಿಜೆಪಿ ಜೊತೆ ಬಂದರೆ ಖಂಡಿತಾ ಸೇರಿಸಿಕೊಳ್ಳುತ್ತೇವೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.

ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್

ಇಂದು ಯಲ್ಲಾಪುರದ ಅರಬೈಲಿನಲ್ಲಿ ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್​​ನವರು ಅವರಾಗಿ ಬಂದರೆ ನಾವು ಸೇರಿಸಿಕೊಳ್ಳಲ್ಲ ಅನ್ನುವಷ್ಟು ಮೂರ್ಖರಲ್ಲ. ಒಂದು ಬಾರಿ ಕಾಂಗ್ರೆಸ್ ಇನ್ನೊಂದು ಬಾರಿ ಬಿಜೆಪಿ ಎಂದು ಹೋಗುತ್ತಾರೆ. ಜೆಡಿಎಸ್​ ನಮ್ಮ ಪಕ್ಷಕ್ಕೆ ಬಂದರೆ ಇಲ್ಲ ಎನ್ನುವುದಿಲ್ಲ ಎಂದರು.

ಓದಿ: ಶಬರಿಮಲೆ ವಾರ್ಷಿಕ ಮಂಡಲ ಪೂಜೆ ಸಂಪನ್ನ; ಡಿ.30ಕ್ಕೆ ಮತ್ತೆ ಬಾಗಿಲು ತೆರೆಯಲಿದೆ ದೇವಸ್ಥಾನ

ಇನ್ನು ರಾಜ್ಯದಲ್ಲಿ ಕೋವಿಡ್ ಲಸಿಕೆ ನೀಡಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಉಚಿತವಾಗಿ ಲಸಿಕೆ ನೀಡಲಾಗುವುದು. ಇದಕ್ಕೆ ತರಬೇತಿ ಸಹ ನೀಡಲಾಗಿದೆ ಎಂದರು.

ABOUT THE AUTHOR

...view details