ಭಟ್ಕಳ : ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ನಡೆದ ರಾಜ್ಯಮಟ್ಟದ ಐ.ಸಿ.ಎಸ್.ಇ ಶಾಲೆಗಳ ಕಬಡ್ಡಿ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿ. ನಂತರ ರಾಷ್ಟ್ರ ಮಟ್ಟದಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಭಟ್ಕಳ ನ್ಯೂ ಶಮ್ಸ್ ಸ್ಕೂಲ್ ತಂಡದ ಐದು ವಿದ್ಯಾರ್ಥಿಗಳು ಭಾಗವಹಿಸಿ ರಾಜ್ಯಕ್ಕೆ ತೃತೀಯ ಸ್ಥಾನವನ್ನು ತಂದು ಭಟ್ಕಳದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಐ.ಸಿ.ಎಸ್.ಇ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ ಪಡೆದ ನ್ಯೂ ಶಮ್ಸ್ ಸ್ಕೂಲ್ ತಂಡ - ಕಬಡ್ಡಿ ಪಂದ್ಯಾವಳಿ
ರಾಷ್ಟ್ರ ಮಟ್ಟದಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಭಟ್ಕಳ ನ್ಯೂ ಶಮ್ಸ್ ಸ್ಕೂಲ್ ತಂಡದ ಐದು ವಿದ್ಯಾರ್ಥಿಗಳು ಭಾಗವಹಿಸಿ ರಾಜ್ಯಕ್ಕೆ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ತಮಿಳುನಾಡಿನಲ್ಲಿ ನಡೆದ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯಲ್ಲಿ ರಾಜ್ಯಕ್ಕೆ ತೃತೀಯಾ ಸ್ಥಾನವನ್ನು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇದರಲಿ ನ್ಯೂಶಮ್ಸ್ ಸ್ಕೂಲ್ನ ಸೈಫುಲ್ಲಾ ಖತೀಬ್ ತಂಡದ ನಾಯಕನಾಗಿ ತಂಡವನ್ನು ಪ್ರತಿನಿಧಿಸಿದ್ದಾನೆ. ಅಲ್ಲದೆ ರಾಷ್ಟ್ರಮಟ್ಟದಲ್ಲಿ ತನ್ನ ಉತ್ತಮ ಪ್ರದರ್ಶನಕ್ಕಾಗಿ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾಕ್ಕಾಗಿ ಆಯ್ಕೆಯಾಗಿದ್ದಾನೆ ಎಂದು ರಾಜ್ಯ ತಂಡದ ಕೋಚ್ ಭಟ್ಕಳದ ನ್ಯೂಶಮ್ಸ್ ಸ್ಕೂಲ್ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸಖಲೈನ್‍ಎಸ್.ಎಂ. ತಿಳಿಸಿದ್ದಾರೆ.
ಇಸ್ಮಾಯಿಲ್ ಮೊಹತೆಶಮ್, ನುಫೈಆಹ್ಮದ್, ನುಜ್ಹಾಆಹ್ಮದ್, ಹಾಗೂ ಉಬೈದ್ ಬರ್ಮಾವರ್ ರಾಷ್ಟ್ರೀಯ ತಂಡದಲ್ಲಿ ಆಡಿದ ಇತರ ಆಟಗಾರರಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದೆ.