ಕಾರವಾರ (ಉತ್ತರ ಕನ್ನಡ):ಸಂಸದ ಅನಂತಕುಮಾರ್ ಹೆಗಡೆ ಅವರು ಸಾಯಲಿ ಅಥವಾ ಸತ್ತರೆ ಒಳ್ಳೆಯದು ಎಂದು ನಾನು ಹೇಳಿಲ್ಲ. ಜನ 25 ವರ್ಷ ಲೋಕಸಭೆಗೆ ಆಯ್ಕೆ ಮಾಡಿದರೂ ಏನೂ ಕೆಲಸ ಮಾಡದ ಕಾರಣ ಅವರು ಇದ್ದರೂ ಒಂದೇ ಇಲ್ಲದೇ ಇದ್ದರೂ ಒಂದೇ ಎಂದು ಹೇಳಿದ್ದೇನೆ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಸ್ಪಷ್ಟನೆ ನೀಡಿದ್ದಾರೆ.
ಕಾರವಾರದ ಜಿಲ್ಲಾ ಪತ್ರಿಕಾಭವನದಲ್ಲಿ ಮಾಧ್ಯಮಗೋಷ್ಠಿ ಮಾಡಿ ಮಾತನಾಡಿದ ಅವರು, ಕಳೆದ ಎರಡು ದಿನದ ಹಿಂದೆ ಮಾತನಾಡುವಾಗ ನಾನು, ಸಂಸದ ಅನಂತಕುಮಾರ್ ಹೆಗಡೆಯನ್ನು ಐದು ಬಾರಿ ಲೋಕಸಭೆಗೆ ಆರಿಸಿ ಕಳುಹಿಸಿದರು. ಉತ್ತರ ಕನ್ನಡ ಜಿಲ್ಲೆಗೆ ಒಂದೇ ಒಂದು ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸ ಮಾಡಿಲ್ಲ. ಆದ್ದರಿಂದ ಅವರು ಇದ್ದರೂ ಒಂದೇ ಇಲ್ಲದೇ ಇದ್ದರೂ ಒಂದೇ ಎಂದು ಹೇಳಿದ್ದೇನೆ. ಆದರೆ ಅವರ ಮರಿ ಪುಡಾರಿಗಳು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ನಾನು ಬಿಜೆಪಿ ಪಕ್ಷದಲ್ಲಿದ್ದು, ಮಂತ್ರಿಯಾಗಿ ಅವರೊಂದಿಗೆ ಒಡನಾಟ ಇಟ್ಟುಕೊಂಡಿದ್ದೆ. ಆದರೆ ಅವರ ಸಾವನ್ನು ಬಯಸಿಲ್ಲ ಎಂದು ಹೇಳಿದರು.