ಶಿರಸಿ:ಬಿಜೆಪಿಯ ನಿಯತ್ತಿನ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದೇವೆ. ಹೈಕಮಾಂಡ್ ಯಾವುದೇ ಹುದ್ದೆ ನೀಡಿದರೂ ನಿಭಾಯಿಸುತ್ತೇನೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೂತನ ಅಧ್ಯಕ್ಷ ವಿ ಎಸ್ ಪಾಟೀಲ್ ಹೇಳಿದ್ದಾರೆ.
ಹೈಕಮಾಂಡ್ ಯಾವುದೇ ಹುದ್ದೆ ನೀಡಿದ್ರೂ ನಿಭಾಯಿಸುವೆ.. ವಿ ಎಸ್ ಪಾಟೀಲ್ - ಉತ್ತರಕನ್ನಡ ಸುದ್ದಿ
ಬಿಜೆಪಿಯ ನಿಯತ್ತಿನ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದೇವೆ. ಹೈಕಮಾಂಡ್ ಯಾವುದೇ ಹುದ್ದೆ ನೀಡಿದರೂ ನಿಭಾಯಿಸುತ್ತೇನೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೂತನ ಅಧ್ಯಕ್ಷ ವಿ ಎಸ್ ಪಾಟೀಲ್ ಹೇಳಿದ್ದಾರೆ.
ಜಿಲ್ಲೆಯ ಮುಂಡಗೋಡಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ನಿಗಮದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಈ ಹಿಂದೆ ಟಿಕೆಟ್ ಕೇಳಿದಾಗ ಅನರ್ಹ ಶಾಸಕರಿಗೆ ನೀಡುತ್ತೇವೆ ಎಂದು ಹೇಳಿತ್ತು. ಈಗ ಹುದ್ದೆ ನೀಡಿದ್ದು, ಇದನ್ನ ನಿಭಾಯಿಸುತ್ತೇವೆ ಎಂದರು.
ಪಕ್ಷದಲ್ಲಿ ಅಧಿಕಾರವನ್ನು ಹುಡುಕಿಕೊಂಡು ಹೋಗಬಾರದು. ಅದಾಗೇ ನಮ್ಮ ಬಳಿ ಬರುತ್ತದೆ. ನಿಷ್ಠೆಯಿಂದ ಇದ್ದಲ್ಲಿ ಅಧಿಕಾರ ಸಿಗುತ್ತದೆ. ಮುಂದಿನ ಚುನಾವಣೆಯಲ್ಲಿ ಹೆಬ್ಬಾರ್ ಅವರಿಗೆ ಟಿಕೆಟ್ ಸಿಗದಿದ್ದರೆ,ನಾನು ಆಕಾಂಕ್ಷಿ. ಅವರಿಗೆ ಸಿಕ್ಕರೇ ನನ್ನದೇನು ತಕರಾರಿಲ್ಲ. ಅಂತಿಮವಾಗಿ ಪಕ್ಷ ತೀರ್ಮಾನಕೈಗೊಳ್ಳುತ್ತದೆ ಎಂದರು.