ಕಾರವಾರ:ಸಮುದ್ರದಲ್ಲಿ ಈಜಲು ಹೋಗಿ ಅಲೆಗೆ ಕೊಚ್ಚಿ ಹೋಗುತ್ತಿದ್ದ ಸಿನಿಮಾ ನಟರೊಬ್ಬರನ್ನು ರಕ್ಷಣೆ ಮಾಡಿರುವ ಘಟನೆ ಕುಮಟಾ ತಾಲೂಕಿನ ಗೋಕರ್ಣದ ಕುಡ್ಲೆ ಬೀಚ್ನಲ್ಲಿ ನಡೆಯಿತು. ಹೈದರಾಬಾದ್ ಮೂಲದ ಚಿತ್ರನಟ ಅಖಿಲ್ ರಾಜ್ (26) ರಕ್ಷಣೆಗೊಳಗಾದವರು.
ಕಾರವಾರ: ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ನಟ, ಬೀಚ್ ಸಿಬ್ಬಂದಿಯಿಂದ ರಕ್ಷಣೆ - ಅಲೆಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ನಟ
ಹೈದರಾಬಾದ್ ಮೂಲದ ನಟ ಅಖಿಲ್ ರಾಜ್ ಗೋಕರ್ಣ ಸಮೀಪ ಸಮುದ್ರದಲ್ಲಿ ಈಜಲು ಹೋಗಿ ಅಲೆಗೆ ಸಿಲುಕಿ ಸಂಕಷ್ಟದಲ್ಲಿದ್ದರು.
ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ನಟ
ಸಮುದ್ರದಲ್ಲಿ ಈಜಲು ಹೋದಾಗ ಸುಳಿಗೆ ಸಿಲುಕಿರುವ ಇವರು ಮುಳುಗುತ್ತಿದ್ದರು. ಇದನ್ನು ಗಮನಿಸಿದ ಗೋಕರ್ಣ ಅಡ್ವೆಂಚರ್ ಸಂಸ್ಥೆಯ ಸಿಬ್ಬಂದಿ ಹಾಗೂ ಲೈಫ್ ಗಾರ್ಡ್ ಸಿಬ್ಬಂದಿ ಜಟ್ ಸ್ಕೀ ವಾಟರ್ ಬೈಕ್ ಮೂಲಕ ತೆರಳಿ ರಕ್ಷಣೆ ಮಾಡಿದ್ದಾರೆ. ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಗೋಕರ್ಣ ಬೀಚ್ ದಡದಲ್ಲಿ ಡಾಲ್ಪಿನ್ ಪತ್ತೆ... ಮರಳಿ ಸಮುದ್ರಕ್ಕೆ ಬಿಟ್ಟ ಲೈಫ್ಗಾರ್ಡ್ ಸಿಬ್ಬಂದಿ
Last Updated : Oct 21, 2022, 4:01 PM IST