ಶಿರಸಿ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹೆಂಡತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿ ತಾನು ಸಹ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಗೋಡಿನಲ್ಲಿ ನಡೆದಿದೆ.
ಕೌಟುಂಬಿಕ ಕಲಹ: ಪತ್ನಿಗೆ ಪೆಟ್ರೋಲ್ ಸುರಿದ ಬೆಂಕಿ ಹಚ್ಚಿದ ಪತಿ.. ಬಳಿಕ ಆತ್ಮಹತ್ಯೆಗೆ ಯತ್ನ - Husband tried to kill wife In Siddapura
ಸಿದ್ದಾಪುರ ತಾಲೂಕಿನಲ್ಲಿ ಪತ್ನಿಗೆ ಪೆಟ್ರೋಲ್ ಸುರಿದ ಪತಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

Husband tried to kill wife In Siddapura
ಗುತ್ಯ ಸಣ್ಣಹುಡುಗ ಚನ್ನಯ್ಯ (50) ಎಂಬಾತನೇ ಪತ್ನಿ ರೇಣುಕಾಳ (45) ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದಾತ. ಪರಿಣಾಮ ರೇಣುಕಾಳ ದೇಹದ ಅರ್ಧ ಭಾಗ ಸುಟ್ಟು ಹೋಗಿದೆ. ಬಳಿಕ ತಾನು ಸಹ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಆತನ ಸ್ಥಿತಿಯೂ ಗಂಭೀರವಾಗಿದೆ. ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಇದನ್ನೂ ಓದು: ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಕಾರ್ಮಿಕ ಸಾವು.. ಪ್ರತಿಭಟಿಸಿದ ಸ್ಥಳೀಯರಿಗೆ ಪೊಲೀಸರ ಲಾಠಿ ಏಟು