ಕಾರವಾರ :ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹತೋಟಿಗೆ ಬಂದ ಬೆನ್ನಲೇ ಇದೀಗ ಭಟ್ಕಳ ಮೂಲದ ಗರ್ಭಿಣಿಯೊಬ್ಬರಲ್ಲಿ ಸೋಂಕಿರೋದು ದೃಢಪಟ್ಟಿದೆ. ಇದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.
ದುಬೈನಿಂದ ಬಂದ ಪತಿಗೆ ಸೋಂಕಿರದಿದ್ರೂ ಪತ್ನಿಗೆ ಕೊರೊನಾ ಪಾಸಿಟಿವ್!! - Husband from Dubai
ಭಟ್ಕಳ ಮೂಲದ ಗರ್ಭಿಣಿಯೋರ್ವಳಲ್ಲಿ ಕೊರೊನಾ ಸೋಂಕು ಕಂಡು ಬಂದಿದೆ. ಆಕೆಯ ಪತಿ ಮಾ. 12ರಂದು ದುಬೈನಿಂದ ಭಟ್ಕಳಕ್ಕೆ ಬಂದಿದ್ದರು. ಆದ್ರೆ ಆಗ ಪತಿಯಲ್ಲಿ ಸೋಂಕು ಕಂಡು ಬಂದಿರಲಿಲ್ಲ. ಆದ್ರೀಗ ಪತ್ನಿಯಲ್ಲಿ ಸೋಂಕು ಕಂಡು ಬಂದಿದೆ.

ಭಟ್ಕಳದ 26 ವರ್ಷದ ಈ ಗರ್ಭಿಣಿ ಪತಿ ದುಬೈನಿಂದ ಮಾರ್ಚ್ 12ರಂದು ವಾಪಸ್ ಆಗಿದ್ದರು. ಆದರೆ, ಪತಿಯಲ್ಲಿ ಕಾಣಿಸಿಕೊಳ್ಳದ ಕೊರೊನಾ ವೈರಸ್ ಇದೀಗ ಐದು ತಿಂಗಳ ಗರ್ಭಿಣಿಯಲ್ಲಿ ಕಾಣಿಸಿದೆ. ಈಕೆಗೆ ಸೋಂಕು ಹೇಗೆ ಬಂದಿದೆ ಎಂಬುದನ್ನು ಪರಿಶೀಲನೆ ನಡೆಸಲಾಗುತ್ತಿದೆ.
ಸದ್ಯ ಗರ್ಭಿಣಿಗೆ ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ರವಾನಿಸಲು ಚಿಂತನೆ ನಡೆಸಲಾಗ್ತಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಈವರೆಗೆ ಒಟ್ಟು 10 ಪ್ರಕರಣ ದೃಢಪಟ್ಟಿವೆ. ಇದರಲ್ಲಿ ಮೂವರು ಗುಣಮುಖರಾಗಿದ್ದಾರೆ. ಇನ್ನೂ ಆರು ಸೋಂಕಿತರಿಗೆ ನೌಕಾನೆಲೆಯ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.