ಹುಬ್ಬಳ್ಳಿ: ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ರಾಮಚಂದ್ರ ಕಾರಟಗಿ, ಡಾ.ವೀಣಾ ಕಾರಟಗಿ ಅವರು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಮೈನಳ್ಳಿ, ಎರೆಬೈಲು ಗ್ರಾಮದ ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸಿದ್ದಾರೆ.
ನೆರೆ ಸಂತ್ರಸ್ತರಿಗೆ ಮಿಡಿದ ಹುಬ್ಬಳ್ಳಿಯ ವೈದ್ಯ ದಂಪತಿ: ಸಾವಿರಾರು ನಿರಾಶ್ರಿತರಿಗೆ ಫ್ರೀ ಟ್ರೀಟ್ಮೆಂಟ್ - ವೈದ್ಯ ದಂಪತಿ
ಹುಬ್ಬಳ್ಳಿಯ ವೈದ್ಯ ದಂಪತಿ ಉತ್ತರ ಕನ್ನಡ ಜಿಲ್ಲೆಯ ನೆರೆ ಪೀಡಿತ ಗ್ರಾಮಗಳ ಸಂತ್ರಸ್ತರಿಗೆ ನೆರವು ನೀಡಿದ್ದಾರೆ. ಸುಮಾರು 3 ಸಾವಿರ ನಿರಾಶ್ರಿತರಿಗೆ ಅಗತ್ಯ ವಸ್ತುಗಳ ಜತೆಗೆ ಆರೋಗ್ಯ ತಪಾಸಣೆ ಜೊತೆಗೆ ಔಷಧಿಯನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
ಹುಬ್ಬಳ್ಳಿಯ ವೈದ್ಯ ದಂಪತಿಯಿಂದ ಉತ್ತರ ಕನ್ನಡ ನೆರೆ ಸಂತ್ರಸ್ತರಿಗೆ ನೆರವು
ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಇವರು, ಸ್ವತಃ ತಾವೇ ಸಂತ್ರಸ್ತರ ಪ್ರದೇಶಗಳಿಗೆ ಭೇಟಿ ನೀಡಿ, ಪರಿಹಾರ ವಂಚಿತ ಗ್ರಾಮಗಳನ್ನು ಗುರುತಿಸಿದ್ದಾರೆ. ಇದರೊಂದಿಗೆ ಸಂತ್ರಸ್ತರಿಗೆ ಉಚಿತವಾಗಿ ಔಷಧಿ ಹಾಗೂ ತಪಾಸಣೆ ಜೊತೆಗೆ ದಿನ ಬಳಿಕೆಯ ವಸ್ತುಗಳಾದ ಬಕೆಟ್, ಚಾಪೆ, ಹೊದಿಕೆ, ಅಕ್ಕಿ, ಸಕ್ಕರೆ ಹೀಗೆ ದಿನ ಬಳಕೆಯ ವಸ್ತುಗಳನ್ನು ವಿತರಿಸಿದ್ದಾರೆ.
ಶಾಲಾ ಮಕ್ಕಳಿಗೆ ಬ್ಯಾಗ್, ಪುಸ್ತಕಗಳನ್ನು ಸಹ ವಿತರಿಸಿದ್ದಾರೆ. ಈ ವೈದ್ಯ ದಂಪತಿ ಸೇವೆಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.