ಶಿರಸಿ :ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮರಲಿಗೆ ಊರಲ್ಲಿ ವಾಸಿಸುತ್ತಿರುವ ಕುಟುಂಬವೊಂದರ ಜೀವನ ಚಿಂತಾಜನಕವಾಗಿದೆ. ಕೇಶವ ಮೇಸ್ತಾ ದಂಪತಿ ಮನೆ ಕಳೆದ ವರ್ಷ ಸುರಿದ ಭಾರೀ ಮಳೆಗೆ ಸಂಪೂರ್ಣ ನೆಲಸಮವಾಗಿದೆ. ಇದೀಗ ಮುರುಕಲು ಮನೆಯಲ್ಲೇ ವಾಸ ಮಾಡುತ್ತಿದ್ದಾರೆ.
ಕೇಶವ ಮೇಸ್ತಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇಬ್ಬರನ್ನೂ ಓದಿಸೋಕೆ ಸಾಧ್ಯವಾಗದೇ ತಮ್ಮ ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದಾರೆ. ಮನೆಯಿಲ್ಲದ ಕಾರಣ ಈ ನಿರ್ಧಾರ ಕೈಗೊಂಡಿದ್ದಾರೆ. ಕೂಲಿ ಕೆಲಸಕ್ಕೆ ಹೋದ್ರೆ ಮಾತ್ರ ಇವರ ಜೀವನ ಸಾಗುತ್ತದೆ. ಮನೆಯ ಯಜಮಾನ ಕೇಶವ ಮೇಸ್ತಾ ಕೂಲಿ ಕೆಲಸಕ್ಕೆ ಹೋಗ್ತಾರೆ. ಇವರ ಪತ್ನಿ ಅನಿತಾ ಮನೆಗೆಲಸ ಮಾಡಿಕೊಂಡು ಮನೆಯಲ್ಲೇ ಇರುತ್ತಾರೆ.
ಹಿಂದಿನ ವರ್ಷದ ಮಳೆಗೆ ಮನೆ ಸಂಪೂರ್ಣ ನೆಲಕಚ್ಚಿದ ಮೇಲೆ ಸ್ಥಳೀಯ ವಿಲೇಜ್ ಅಕೌಂಟೆಂಟ್ ಬಂದು ಮನೆ ನೋಡಿದ್ದರು. ಅದಾದ ಮೇಲೆ ಸರ್ಕಾರಕ್ಕೆ ವರದಿ ಕೂಡ ಸಲ್ಲಿಸಿದ್ರು. ಆದ್ರೆ, ಮನೆಯಲ್ಲಿ ವಾಸಿಸಲಾಗದ ಸ್ಥಿತಿ ಇದ್ರೂ ಕೂಡ ಇವರಿಗೆ ಬಂದಿರೋ ಪರಿಹಾರದ ಮೊತ್ತ ಮಾತ್ರ 50 ಸಾವಿರ ರೂಪಾಯಿ.