ಶಿರಸಿ:ಇಲ್ಲಿಯ ಗಣೇಶನಗರದ ಮನೆಯೊಂದರ ಬೀಗ ಮುರಿದು ಬೆಲೆಬಾಳುವ ಸ್ವತ್ತುಗಳನ್ನು ಕಳುವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹಾನಗಲ್ ಮೂಲದ ಅಬ್ದುಲ್ (24) ಹಾಗೂ ಅಜಯ್ (19) ಬಂಧಿತ ಆರೋಪಿಗಳು. ಇವರು ಗಣೇಶ ನಗರದ ಮಂಜುನಾಥ್ ಕಾಲೋನಿಯಲ್ಲಿನ ಮನೆಯೊಂದರ ಬೀಗ ಒಡೆದು ಮನೆಯಲ್ಲಿದ್ದ ಬಂಗಾರದ ಚೈನ್, ಕಿವಿಯೋಲೆ ಸೇರಿದಂತೆ ಅಂದಾಜು 1.30 ಲಕ್ಷ ರು ಮೌಲ್ಯದ ಸ್ವತ್ತನ್ನು ಕದ್ದು ಪರಾರಿಯಾಗಿದ್ದರು.