ಶಿರಸಿ :ಹೋಟೆಲ್ ಒಂದರ ಗೋಡೆ ಕುಸಿದು ಮೂವರಿಗೆ ತೀವ್ರ ಗಾಯಗೊಂಡ ಘಟನೆ ಉತ್ತರ ಕನ್ನಡದ ಶಿರಸಿ ನಗರದಲ್ಲಿ ನಡೆದಿದೆ.
ಹೋಟೆಲ್ ಗೋಡೆ ಕುಸಿತ: ಮೂವರಿಗೆ ತೀವ್ರ ಗಾಯ.. - ಶಿರಸಿ ನಗರ ಠಾಣೆ
ಹೋಟೆಲ್ ಒಂದರ ಗೋಡೆ ಕುಸಿದು ಮೂವರಿಗೆ ತೀವ್ರವಾಗಿ ಗಾಯಗೊಂಡ ಘಟನೆ ಉತ್ತರ ಕನ್ನಡದ ಶಿರಸಿ ನಗರದಲ್ಲಿ ನಡೆದಿದೆ.

ಹೋಟೆಲ್ ಗೋಡೆ ಕುಸಿತ; ಮೂವರಿಗೆ ತೀವ್ರ ಗಾಯ..
ಹೋಟೆಲ್ ಗೋಡೆ ಕುಸಿತ; ಮೂವರಿಗೆ ತೀವ್ರ ಗಾಯ..
ಇಲ್ಲಿನ ತೃಪ್ತಿ ಹೋಟೆಲ್ ಗೋಡೆ ಪಕ್ಕದ ಕರಾವಳಿ ಹೋಟೆಲ್ ಒಳಗೆ ಕುಸಿದು ಬಿದ್ದಿದೆ, ಪರಿಣಾಮ ಊಟ ಮಾಡುತ್ತಿದ್ದ ಏಳು ಮಂದಿಗೆ ತೀವ್ರ ಗಾಯವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಜ್ಯೋತಿ ನಾಯ್ಕ, ಪರಮೇಶ್ವರ ನಾಗೇಶ, ವೆಂಕಟೇಶ ನಾಯ್ಕ ಹಾಗೂ ಇತರರು ಗಾಯಗೊಂಡವರು ಎಂದು ತಿಳಿದುಬಂದಿದೆ.
ನಿರಂತರ ಸುರಿಯುತ್ತಿರೋ ಮಳೆಯಲ್ಲಿ ರಿಪೇರಿ ಕಾರ್ಯ ನಡೆಯುತ್ತಿತ್ತು. ಈ ವೇಳೆ, ಏಕಾಏಕಿ ಗೋಡೆ ಬಿದ್ದಿದೆ. ಅವಶೇಷದೊಳಗೆ ಸಿಲುಕಿದ ಕೆಲವರನ್ನು ರಕ್ಷಿಸಲಾಗಿದ್ದು. ಈ ಘಟನೆಯ ಕುರಿತು ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.