ಭಟ್ಕಳ: ಪಟ್ಟಣದಲ್ಲಿ ಕೊರೊನಾ ತಂದಿಟ್ಟಿರುವ ಸಂಕಷ್ಟದ ನಡುವೆಯೂ ಭಟ್ಕಳ ಪೌರಕಾರ್ಮಿಕರು ಎದೆಗುಂದದೆ ತಮ್ಮ ಪ್ರಾಮಾಣಿಕ ಕರ್ತವ್ಯ ಪಾಲನೆ ಮಾಡಲು ನಿಂತು ಮನೆ-ಮನೆಗೆ ತೆರಳಿ ಸ್ಯಾನಿಟೈಸರ್ ಸಿಂಪಡಿಸಿ ಇತರೆ ಮಹತ್ವದ ಕಾರ್ಯಗಳನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದ ತಾಲೂಕಿನ ಜಾಲಿ ಪ.ಪಂ ಮತ್ತು ಭಟ್ಕಳ ಪುರಸಭೆಗೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ ಪ್ರಶಂಸನಾ ಪತ್ರ ನೀಡಿ ಗೌರವಿಸಿದೆ.
ಭಟ್ಕಳ ಪುರಸಭೆ-ಜಾಲಿ ಪ.ಪಂ.ಗೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದಿಂದ ಪ್ರಶಂಸನಾ ಪತ್ರ - Bhatkala latest news
ಕೊರೊನಾ ವಿರುದ್ಧದ ಹೋರಾಟದಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ವವಾದದ್ದು. ಕೊರೊನಾ ತಡೆಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಮಹತ್ವದ ಕಾರ್ಯಗಳನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದ ತಾಲೂಕಿನ ಜಾಲಿ ಪ.ಪಂ ಮತ್ತು ಭಟ್ಕಳ ಪುರಸಭೆಗೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ ಪ್ರಶಂಸನಾ ಪತ್ರ ನೀಡಿ ಗೌರವಿಸಿದೆ.
Honored to corona warrior
ಒಂದು ಹಂತದಲ್ಲಿ ಭಟ್ಕಳ ಪಟ್ಟಣ ವ್ಯಾಪ್ತಿ ಕಂಟೈನ್ಮೆಂಟ್ ಝೋನ್ ಆಗಿದ್ದು, ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು. ಆರಂಭದಲ್ಲಿ ಕೊರೊನಾ ಕುರಿತು ಅನೇಕ ಉಹಾಪೋಹಗಳಿದ್ದು, ಯಾವುದು ಮಾಡಬೇಕು, ಮಾಡಬಾರದು ಎನ್ನುವ ಆತಂಕ ಜನರಲ್ಲಿತ್ತು.