ಕಾರವಾರ: ಬಸ್ ನಿಲ್ದಾಣದಲ್ಲಿ ನಿಂತಿದ್ದವರ ಮೇಲೆ ಏಕಾಏಕಿ ಜೇನು ನೊಣಗಳು ದಾಳಿ ನಡೆಸಿದ ಪರಿಣಾಮ ಓರ್ವ ವಿದ್ಯಾರ್ಥಿನಿ ಸೇರಿದಂತೆ ಮೂವರು ಗಾಯಗೊಂಡ ಘಟನೆ ಅಂಕೋಲಾದಲ್ಲಿ ನಡೆದಿದೆ.
ಪಟ್ಟಣದ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಜೇನು ನೊಣಗಳ ದಾಳಿಗೆ ಸಿಲುಕಿ ಅಸ್ವಸ್ಥರಾದವರನ್ನು ಹತ್ತಿರದ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜೇನು ದಾಳಿಗೊಳಗಾದವರ ಪೈಕಿ ವಿದ್ಯಾರ್ಥಿನಿ ಗೋವಾ ಮೂಲದವಳಾಗಿದ್ದಾರೆ.