ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಹೋಳಿ ವೇಳೆ ಆಚರಿಸುವ ವಿಶಿಷ್ಟ ಸುಗ್ಗಿ ಕುಣಿತಕ್ಕೆ ಚಾಲನೆ ದೊರೆತಿದ್ದು ಕೋಲಾಟ, ಗುಮಟೆ ಪಾಂಗಿನ ಸದ್ದಿನೊಂದಿಗೆ ಬಗೆ ಬಗೆಯ ಹಾರ ತುರಾಯಿ ತೊಟ್ಟ ವೇಷಧಾರಿಗಳು ಕುಣಿತ ಜೋರಾಗಿದೆ.
ಕರಾವಳಿಯಲ್ಲಿ ಸುಗ್ಗಿ ಸಂಭ್ರಮ: ಹಾರ ತುರಾಯಿ ತೊಟ್ಟು ವೇಷಧಾರಿಗಳ ಕುಣಿತ
ಉತ್ತರ ಕನ್ನಡ ಭಾಗದಲ್ಲಿ ಹೋಳಿ ಹಬ್ಬದ ಪ್ರಯುಕ್ತ ಆಚರಿಸಲಾಗುವ ಸುಗ್ಗಿ ಕುಣಿತಕ್ಕೆ ಚಾಲನೆ ದೊರೆತಿದೆ. ಆದರೆ ಕೊರೊನಾದಿಂದ ಸಂಭ್ರಮದ ಆಚರಣೆಗೆ ಬ್ರೇಕ್ ಬಿದ್ದಿದೆ.
ಆದರೆ ಕೊರೊನಾದಿಂದಾಗಿ ಈ ಬಾರಿ ಸಂಭ್ರಮದ ಆಚರಣೆಗೆ ಬ್ರೇಕ್ ಬಿದ್ದಿದ್ದು, ವಿಶಿಷ್ಟ ಸುಗ್ಗಿ ಕುಣಿತವನ್ನ ಸರಳವಾಗಿ ಆಚರಿಸಿ ಸಂಪ್ರದಾಯ ಮುಂದುವರಿಸುವ ಪ್ರಯತ್ನ ನಡೆಸಲಾಗಿದೆ. ಜಿಲ್ಲೆಯಲ್ಲಿ ಹಾಲಕ್ಕಿ, ಕೋಮಾರಪಂಥ, ನಾಮಧಾರಿ, ಅಂಬಿಗ, ಆಗೇರ ಸೇರಿದಂತೆ ಅನೇಕ ಸಮುದಾಯದವರು ಸಾಂಪ್ರದಾಯಿಕ ಕಲೆ ಸುಗ್ಗಿ ಕುಣಿತವನ್ನ ಹೋಳಿ ಹಬ್ಬದ ಹಿನ್ನೆಲೆ ಪ್ರಾರಂಭಿಸುತ್ತಾರೆ. ತಾಲೂಕಿನ ಬಿಣಗಾ ಗ್ರಾಮದ ಕರಿ ದೇವರಿಗೆ ಪೂಜೆ ಮಾಡಿ ಹೊರಟಿರುವ ಸುಗ್ಗಿ ಕುಣಿತ ತಂಡದವರು ಮನೆ ಮನೆಗೆ ತೆರಳಿ ತಮ್ಮ ಕಲೆ ಪ್ರದರ್ಶಿಸುತ್ತಿದ್ದಾರೆ.
ತಮ್ಮ ಜನಾಂಗದವರು ನೆಲೆಸಿರುವ ಮನೆ ಮುಂದೆ ತೆರಳಿ ಸುಗ್ಗಿ ಕುಣಿತ ಮಾಡಿದರೆ ಸಮಸ್ಯೆ ಬಗೆಹರಿಯುವುದರ ಜೊತೆಗೆ ರೋಗಗಳು ಮನೆಯವರಿಗೆ ಬರುವುದಿಲ್ಲ ಎಂಬುದು ಕೋಮಾರಪಂಥ ಸಮಾಜದ ನಂಬಿಕೆ. ಆದರೆ ಈ ಬಾರಿ ಕೊರೊನಾ ಆತಂಕ ಇರುವ ಹಿನ್ನೆಲೆ ಸುಗ್ಗಿಯನ್ನ ಸರಳವಾಗಿ ಆಚರಣೆ ಮಾಡಲಾಗುತ್ತಿದೆ ಎನ್ನುತ್ತಾರೆ ಸ್ಥಳೀಯರಾದ ಅರುಣ ಮಾಳ್ಸೇಕರ್.