ಶಿರಸಿ:ರಾಜ್ಯದಲ್ಲಿ ಉಪ ಚುನಾವಣೆ ಮುಗಿಯುವವರೆಗೂ ಬಸವರಾಜ ಬೊಮ್ಮಾಯಿ ಅವರನ್ನ ಚುನಾವಣೆ ಪ್ರಕ್ರಿಯೆಯಿಂದ ದೂರು ಇಡುವಂತೆ ಮಾಜಿ ಸಚಿವ ಎಚ್.ಕೆ.ಪಾಟೀಲ್ ಚುನಾವಣಾ ಆಯೋಗಕ್ಕೆ ಆಗ್ರಹಿಸಿದ್ದಾರೆ.
ಬಸವರಾಜ ಬೊಮ್ಮಾಯಿ ರಾಜೀನಾಮೆಗೆ ಹೆಚ್.ಕೆ.ಪಾಟೀಲ್ ಆಗ್ರಹ - ಹೆಚ್.ಕೆ.ಪಾಟೀಲ್ ಲೇಟೆಸ್ಟ್ ನ್ಯೂಸ್
ಗೃಹಸಚಿವರನ್ನ ಉಪ ಚುನಾವಣೆಯಿಂದ ದೂರ ಇಡುವಂತೆ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಚುನಾವಣಾ ಆಯೋಗಕ್ಕೆ ಆಗ್ರಹಿಸಿದ್ದಾರೆ.
![ಬಸವರಾಜ ಬೊಮ್ಮಾಯಿ ರಾಜೀನಾಮೆಗೆ ಹೆಚ್.ಕೆ.ಪಾಟೀಲ್ ಆಗ್ರಹ ಬಸವರಾಜ ಬೊಮ್ಮಾಯಿ ರಾಜೀನಾಮೆಗೆ ಆಗ್ರಹ,HK Patil demands Basavaraj Bommai resign](https://etvbharatimages.akamaized.net/etvbharat/prod-images/768-512-5218662-thumbnail-3x2-brm.jpg)
ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ 20ರಂದು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯಲ್ಲಿ ಗೃಹ ಸಚಿವರ ಕಾರು ತಪಾಸಣೆ ಮಾಡದೇ ಹಾಗೇ ಬಿಡಲಾಗಿತ್ತು. ಈ ಬಗ್ಗೆ ಚೆಕ್ಪೊಸ್ಟ್ನಲ್ಲಿದ್ದ ಪೊಲೀಸರು ಬೆಂಗಾವಲು ವಾಹನದ ಚಾಲಕನನ್ನ ಅಮಾನತು ಮಾಡಲಾಗಿದೆ. ಅಮಾನತು ಮಾಡಿರುವುದು ನೋಡಿದರೆ ಗೃಹ ಸಚಿವರೇ ಅಕ್ರಮ ನಡೆಸಿದಂತೆ ಕಾಣುತ್ತಿದೆ. ಈ ಹಿನ್ನಲೆಯಲ್ಲಿ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.
ಬಿಜೆಪಿಯವರು ಮಾಡಿದ ಕುತಂತ್ರಕ್ಕೆ ಜನರು ಚುನಾವಣೆಯಲ್ಲಿ ಉತ್ತರ ಕೊಡಲಿದ್ದಾರೆ. ರಾಜಕೀಯ ಅನೈತಿಕತೆಯನ್ನೇ ಬಿಜೆಪಿಗರು ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಆಗಿರುವ ಮುಖಭಂಗದಿಂದಾದರೂ ಬಿಜೆಪಿ ಪಾಠ ಕಲಿಯಬೇಕು ಎಂದಿದ್ದಾರೆ.