ಶಿರಸಿ(ಉತ್ತರ ಕನ್ನಡ): ದೇವನಳ್ಳಿಯಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಶಿರಸಿಯ ಸ್ವರ್ಣವಲ್ಲಿ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನಮ್ಮ ಸಮಾಜದಲ್ಲಿ ಹಿಂದೂಗಳಿಗೊಂದು ಬೇರೆ ಸಮಾಜಕ್ಕೊಂದು ವಿವಾಹದ ಕಾನೂನು ಇದ್ದು, ಕಾನೂನಿನಲ್ಲಿ ತಾರತಮ್ಯವಿದೆ. ಬೇರೆ ಸಮಾಜಕ್ಕೆ ಬೇರೆ ದೇಶದ ಆಶ್ರಯ ಇದೆ. ಹಿಂದೂಗಳಿಗೆ ಹಿಂದೂಸ್ಥಾನ ಒಂದೇ ಗತಿ. ಹೀಗಾಗಿ ಹಿಂದೂಸ್ತಾನದಲ್ಲಿ ನಾವು ಅಲ್ಪಸಂಖ್ಯಾಗರಾಗಬಾರದು ಎಂದು ಹಿಂದೂ ಸಮಾಜಕ್ಕೆ ಜಾಗೃತಿ ಸಂದೇಶ ನೀಡಿದರು.
ನಂತರ ಮಾತನಾಡಿದ ಅವರು ಹಿಂದೂಗಳು ಮೂರು ತಪ್ಪುಗಳನ್ನು ಮಾಡುತ್ತಿದ್ದಾರೆ. ಮಕ್ಕಳಿಗೆ ತಡವಾಗಿ ವಿವಾಹ ಮಾಡುತ್ತಿರುವುದು ಸಾಕಷ್ಟು ಸಮಸ್ಯೆಗೆ ಕಾರಣವಾಗಿದೆ ಎಂದರು. ಬೇರೆ ಸಮಾಜದಲ್ಲಿ 15 ವರ್ಷಕ್ಕೆ ವಿವಾಹ ಮಾಡಿ ಹಮ್ಮ್ ದೋ ಹಮಾರೆ ದಸ್ ಎನ್ನುತ್ತಾರೆ. ಆದರೇ ಹಿಂದೂಗಳಲ್ಲಿ 30 ವರ್ಷವಾದರೂ ವಿವಾಹ ಮಾಡುತ್ತಿಲ್ಲ. ನಾವು ಹಮ್ ದೋ ಹಮಾರೆ ಏಕ್ ಬಸ್ ಎನ್ನುತ್ತೇವೆ. ಹಿಂದೂ ಪರಿವಾರ ಅಲ್ಪ ಸಂತತಿ, ಅತೀ ನಿಯಂತ್ರಣ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಕ್ಕಳನ್ನು ಪಡೆದ ಹಿಂದೂಸ್ಥಾನದಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗುವುದನ್ನು ತಪ್ಪಿಸಬೇಕು ಎಂದು ಸ್ವಾಮೀಜಿ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ದಿಕ್ಸೂಚಿ ಭಾಷಣ ಮಾಡಿದ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ಹಿಂದೂ ಎನ್ನುವುದು ಧರ್ಮ, ಉಳಿದಂತಹದ್ದು ರಿಲೀಜಿಯನ್ ಗಳು ಎಂದು ಹೇಳಿದರು. ಇಂಗ್ಲಿಷ್ ನ ರಿಲೀಜಿಯನ್ ಅನ್ನು ಅನುವಾದ ಮಾಡುವಾಗ ನಾವು ಎಡವಟ್ಟು ಮಾಡಿಕೊಂಡಿದ್ದೇವೆ, ಯಾವುದನ್ನು ಧರಿಸಿಕೊಂಡು ಹೋಗುತ್ತೇವೆಯೋ ಅದೇ ಧರ್ಮ ಎಂದರು. ಕೆಲವು ಹಿಂದೂಗಳು ಕ್ರಿಶ್ಚಿಯನ್ ಧರ್ಮಕ್ಕೆ ಕನ್ವರ್ಟ ಆಗಿ ಚರ್ಚಿಗೆ ಹೋಗುತ್ತಾರೆ. ಆದರೇ ಚರ್ಚಿನಲ್ಲಿ ಇವರನ್ನು ಆಕರ್ಶಿಸಲು ಗರುಡುಗಂಬ ಹಾಕಿ ಏಸುಗೆ ಆರತಿ ಮಾಡುತ್ತಾರೆ, ಹರಿಹರದ ಚರ್ಚನಲ್ಲಿ ರಥೋತ್ಸವ ನೆರವೇರಿಸುತ್ತಾರೆ, ಇದೆಲ್ಲವೂ ಹಿಂದೂ ಧರ್ಮದಿಂದಲೇ ಕಾಪಿ ಮಾಡಿರುವುದು ಎಂದು ಹೇಳಿದರು.