ಕರ್ನಾಟಕ

karnataka

ETV Bharat / state

ಪ್ರವಾಹದ ಬೆನ್ನಲ್ಲೆ ರಾಜ್ಯ ಹೆದ್ದಾರಿ ಸಹಿತ ಗುಡ್ಡ ಕುಸಿತ, ದೇವಾಲಯ ಮುಳುಗಡೆ: ಪ್ರತ್ಯಕ್ಷ ವರದಿ - flood in kawar

ಕಾರವಾರ ಜೊಯಿಡಾ ಸಂಪರ್ಕ ಕಲ್ಪಿಸುವ ಅಣಶಿ ಘಟ್ಟದ ರಾಜ್ಯ ಹೆದ್ದಾರಿ ಮೇಲೆ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತವಾದ ಕಾರಣ ಸಂಪೂರ್ಣ ಕಡಿತಗೊಂಡಿದೆ.

hills collapse with state highway
ಕುಸಿದು ಬಿದ್ದ ದೇವಾಲಯದ ಗೋಡೆಗಳು

By

Published : Jul 26, 2021, 5:39 PM IST

Updated : Jul 26, 2021, 7:14 PM IST

ಕಾರವಾರ: ಭಾರಿ ಮಳೆಯಿಂದಾಗಿ ಒಂದೆಡೆ ಪ್ರವಾಹದಿಂದ ಜನರ ಬದುಕು ಅಲ್ಲೋಲ ಕಲ್ಲೋಲವಾಗಿದ್ರೆ ಇನ್ನೊಂದೆಡೆ ಗುಡ್ಡ ಕುಸಿತದಿಂದಾಗಿ ಸಾಕಷ್ಟು ಅನಾಹುತ ಸೃಷ್ಟಿಯಾಗಿದೆ.

ಕಾರವಾರ ಜೊಯಿಡಾ ಸಂಪರ್ಕ ಕಲ್ಪಿಸುವ ಅಣಶಿ ಘಟ್ಟದ ರಾಜ್ಯ ಹೆದ್ದಾರಿ ಮೇಲೆ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತವಾದ ಕಾರಣ ಸಂಪೂರ್ಣ ಕಡಿತಗೊಂಡಿದೆ. ಘಟ್ಟದ ಮೇಲ್ಭಾಗದಿಂದ ಕರಾವಳಿ ಸಂಪರ್ಕಿಸುವ ನಿತ್ಯ ಸಾವಿರಾರು ವಾಹನಗಳು ಓಡಾಡುವ ಹೆದ್ದಾರಿ ಸಂಪೂರ್ಣ ಕುಸಿದಿದ್ದು ಈ ಕುರಿತ ನಮ್ಮ ಪ್ರತಿನಿಧಿ ನಡೆಸಿದ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.

ರಾಜ್ಯ ಹೆದ್ದಾರಿ ಸಹಿತ ಗುಡ್ಡ ಕುಸಿತ: ಈಟಿವಿ ಭಾರತ ಪ್ರತಿನಿಧಿಯಿಂದ ಪ್ರತ್ಯಕ್ಷ ವರದಿ

ಕುಸಿದು ಬಿದ್ದ ದೇವಾಲಯದ ಗೋಡೆಗಳು:

ಕದ್ರಾ ಜಲಾಶಯಗಳಿಂದ ನೀರು ಹೊರ ಬಿಟ್ಟ ಕಾರಣ ಪ್ರವಾಹದಲ್ಲಿ ದೇವಾಲಯದ ಗೋಡೆಗಳು ನೆಲಸಮವಾಗಿರುವ ಘಟನೆ ಕಾರವಾರ ತಾಲೂಕಿನ ಕದ್ರಾ ಸಮೀಪದ ಗಾಂಧಿನಗರದಲ್ಲಿ ನಡೆದಿದೆ.

ದೇವಾಲಯ ಮುಳುಗಡೆ
ಜಲಾಶಯದಿಂದ ನೀರು ಹರಿಬಿಟ್ಟ ಕಾರಣ ಏಕಾಏಕಿ ಏರಿದ ನೀರಿನಿಂದಾಗಿ ಗಾಂಧಿನಗರ ಭಾಗದ ಹತ್ತಾರು ಮನೆಗಳು ಮುಳುಗಡೆಯಾಗಿ, ಅಲ್ಲವೂ ನಾಶವಾಗಿದೆ. ಅಲ್ಲದೆ ಇಲ್ಲಿನ ರಾಧಾಕೃಷ್ಣ ದೇವಾಲಯ ಕೂಡ ಎರಡು ದಿನಗಳ ಕಾಲ ಮುಳುಗಡೆಯಾಗಿತ್ತು.

ಆದರೆ ಇದೀಗ ಪ್ರವಾಹ ಇಳಿದಿದ್ದು ದೇವಾಲಯದ ಗೋಡೆಗಳು ನೆಲಕ್ಕುರುಳಿವೆ. ದೇವಾಲಯದ ಮಹಡಿ ಕೊಚ್ಚಿ ಹೋಗಿದ್ದು, ಬಾಗಿಲುಗಳು ಮುರಿದು ದೇವಾಲಯ ಭಗ್ನಗೊಂಡಿದೆ. ಅಲ್ಲದೆ ದೇವಾಲಯದಲ್ಲಿದ್ದ ಪೂಜಾ ಸಾಮಗ್ರಿ ಕಾಣಿಕೆ ಡಬ್ಬಿ ಕೂಡ ನೀರಲ್ಲಿ ಕೊಚ್ಚಿ ಹೋಗಿದೆ ಎನ್ನಲಾಗಿದೆ.

Last Updated : Jul 26, 2021, 7:14 PM IST

ABOUT THE AUTHOR

...view details