ಶಿರಸಿ:ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಕಾಳಿ ನದಿಗೆ ಕಟ್ಟಲಾಗಿರುವ ಕೊಡಸಳ್ಳಿ ಜಲಾಶಯದ ಮೇಲ್ಭಾಗದ ಗುಡ್ಡ ಕುಸಿದಿದೆ.
ಕೊಡಸಳ್ಳಿ ಜಲಾಶಯ ಬಳಿ ಗುಡ್ಡ ಕುಸಿತ... ಡ್ಯಾಮ್ ಮೇಲ್ಭಾಗದ ರಸ್ತೆಯಲ್ಲಿ ಬಿರುಕು! - Hill collapse top of Kodasalli Reservoir
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಕಾಳಿ ನದಿಗೆ ಕಟ್ಟಲಾಗಿರುವ ಕೊಡಸಳ್ಳಿ ಜಲಾಶಯದ ಮೇಲ್ಭಾಗದಲ್ಲಿ ಗುಡ್ಡ ಕುಸಿದಿದೆ.
ಕೊಡಸಳ್ಳಿ ಜಲಾಶಯದ ಮೇಲ್ಬಾಗದ ಗುಡ್ಡ ಕುಸಿತ..ಡ್ಯಾಂನ ಮೇಲ್ಬಾಗದ ರಸ್ತೆಯ ಹಲವು ಭಾಗದಲ್ಲಿ ಬಿರುಕು
ಗುಡ್ಡ ಕುಸಿತದಿಂದ ಜಲಾಶಯದ ಮೇಲ್ಭಾಗಕ್ಕೆ ಹಾನಿಯಾಗಿದ್ದು, ಜೋಯಿಡಾ ಭಾಗದ ಬಿರ್ಕೊಲ ಗ್ರಾಮಕ್ಕೆ ಹೋಗುವ ಡ್ಯಾಮ್ನ ಮೇಲ್ಭಾಗದ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಡ್ಯಾಮ್ನಲ್ಲಿ 27,754.00 ಕ್ಯೂಸೆಕ್ ಒಳಹರಿವು ಹಾಗೂ 24,165.0 ಕ್ಯೂಸೆಕ್ ಹೊರಹರಿವು ಇದೆ. ಕಳೆದ 24 ಗಂಟೆಯಲ್ಲಿ 20 ಮೀ.ಮೀ ಮಳೆಯಾಗಿದ್ದು, ಇನ್ನೂ ಹೆಚ್ಚಿನ ಮಳೆಯಾದಲ್ಲಿ ಡ್ಯಾಮ್ಗೆ ತೊಂದರೆಯಾಗುವ ಸಾಧ್ಯತೆಗಳಿವೆ.
ಈಗಾಗಲೇ ಜಲಾಶಯದ ಭಾಗ ಅಪಾಯದಲ್ಲಿದ್ದು, ಗುಡ್ಡ ಕುಸಿತ ಹಿನ್ನೆಲೆಯಲ್ಲಿ ಕರ್ನಾಟಕ ಪವರ್ ಕಾರ್ಪೊರೇಷನ್ ಅಧಿಕಾರಿಗಳು ರಸ್ತೆ ಸಂಚಾರ ಸ್ಥಗಿತಗೊಳಿಸಿದ್ದಾರೆ.
Last Updated : Sep 12, 2019, 12:04 PM IST