ಕರ್ನಾಟಕ

karnataka

ETV Bharat / state

ಕ್ಯಾಸಲ್​ ರಾಕ್ ಬಳಿ ಗುಡ್ಡ ಕುಸಿತ: ರೈಲ್ವೆ ಸಂಚಾರ ಸ್ಥಗಿತ

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ವ್ಯಾಪ್ತಿಯಲ್ಲಿ ಬರುವ ಕೂಲಂ ಸ್ಟೇಷನ್ ನಂತರದ ಕಾಲೆ-ಸ್ಯಾವೆಂಡ್ರಾಮ್ ಮಧ್ಯೆ ಗುಡ್ಡ ಕುಸಿದಿದೆ. ರೈಲು ಹಳಿಗೆ ಹೊಂದಿಕೊಡಿರುವ ಗುಡ್ಡ ಕುಸಿದಿದ್ದು, ರೈಲ್ವೆ ಸಂಚಾರ ಸ್ಥಗಿತವಾಗಿತ್ತು.

By

Published : Jul 12, 2019, 6:10 PM IST

ಗುಡ್ಡ ಕುಸಿತ

ಶಿರಸಿ:ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕ್ಯಾಸಲ್​ ರಾಕ್-ಗೋವಾ ಮಾರ್ಗದಲ್ಲಿ ರೈಲು ಹಳಿ ಮೇಲೆ ಪಕ್ಕದ ಗುಡ್ಡ ಕುಸಿದು, ಕೆಲ ಗಂಟೆಗಳ ಕಾಲ ರೈಲ್ವೆ ಸಂಚಾರ ಅಸ್ತವ್ಯಸ್ತವಾಗಿತ್ತು.

ದಾಂಡೇಲಿ ವ್ಯಾಪ್ತಿಯಲ್ಲಿ ಬರುವ ಕೂಲಂ ಸ್ಟೇಷನ್ ನಂತರದ ಕಾಲೆ-ಸ್ಯಾವೆಂಡ್ರಾಮ್ ಮಧ್ಯೆ ಗುಡ್ಡ ಕುಸಿದಿದೆ. ರೈಲು ಹಳಿಗೆ ಹೊಂದಿಕೊಂಡಿರುವ ಗುಡ್ಡ ಕುಸಿದಿದ್ದು, ಸ್ಥಳಕ್ಕೆ ನೈಋತ್ಯ ರೈಲ್ವೆ ವಲಯದ ಜಿಎಂ ಅಜಯಕುಮಾರ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಿಎಂ ನೇತೃತ್ವದಲ್ಲಿ ದುರಸ್ತಿ ಕಾರ್ಯ ನಡೆದಿದ್ದು, ಇಂದು ಸಂಜೆ ವೇಳೆಗೆ ಕೆಲ ಪ್ಯಾಸೆಂಜರ್ ರೈಲು ಸಂಚಾರ ಆರಂಭವಾಗಲಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details