ಕರ್ನಾಟಕ

karnataka

ETV Bharat / state

ಹೆದ್ದಾರಿ 'ಜಾಗ ಮಾರಾಟ'.. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ವ್ಯಕ್ತಿಯಿಂದ ವಿಶಿಷ್ಟ ಪ್ರತಿಭಟನೆ - ಹೊನ್ನಾವರ ಹೆದ್ದಾರಿ ಜಾಗ ಮಾರಾಟ ಪ್ರತಿಭಟನೆ

ಇದು ತಮ್ಮ ವಿಧಾನಸಭಾ ವ್ಯಾಪ್ತಿಯಲ್ಲಿ ಬರುತ್ತದೆ. ಶಿರಸಿ ಕುಮಟಾ ಮಾರ್ಗ ಬಂದ್ ಆದಲ್ಲಿ, ಈ ಮಾವಿನಗುಂಡಿ ರಸ್ತೆಯು ಹೊನ್ನಾವರ-ಸಿದ್ದಾಪುರ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿರುತ್ತದೆ. ಆದರೆ, ರಸ್ತೆ ದುರಸ್ಥಿಗೊಂಡು ಒಂದೂವರೆ ವರ್ಷ ಕಳೆದಿದ್ದು ಈವರೆಗೂ ಕ್ರಮ ಕೈಗೊಂಡಿಲ್ಲ..

highway-for-sale-different-protest-from-rajesh-shet
ಹೆದ್ದಾರಿ ಜಾಗ ಮಾರಾಟ

By

Published : Nov 9, 2020, 7:41 PM IST

Updated : Nov 9, 2020, 8:39 PM IST

ಕಾರವಾರ: ರಾಷ್ಟ್ರೀಯ ಹೆದ್ದಾರಿ ಕುಸಿತ ಉಂಟಾಗಿ ಒಂದೂವರೆ ವರ್ಷ ಕಳೆದರೂ ತಾತ್ಕಾಲಿಕ ಕಾಂಪೌಂಡ್ ಹಾಕಿ ನಿರ್ಲಕ್ಷಿಸಿದ ಹಿನ್ನೆಲೆ ವ್ಯಕ್ತಿಯೋರ್ವ ಕಾಂಪೌಂಡ್ ಮೇಲೆ 'ಜಾಗ ಮಾರಾಟಕ್ಕಿದೆ' ಎಂದು ಬೋರ್ಡ್ ಹಾಕಿ ವಿಭಿನ್ನ ರೀತಿ ಪ್ರತಿಭಟನೆ ನಡೆಸಿರುವ ಘಟನೆ ಹೊನ್ನಾವರದಲ್ಲಿ ನಡೆದಿದೆ.

ಹೊನ್ನಾವರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಗುಂಡಬಾಳದ ಬಳಿ ಕಳೆದ ಮಳೆಗಾಲದ ವೇಳೆ ಗುಡ್ಡ ಕುಸಿತವಾಗಿತ್ತು. ಈ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ನಾಮಕಾವಸ್ತೆ ಕಾಂಪೌಂಡ್ ಹಾಕಿದ್ದು ಬಿಟ್ಟರೆ ಈವರೆಗೂ ಯಾವುದೇ ಶಾಶ್ವತ ಕಾಮಗಾರಿ ನಡೆಸಿಲ್ಲ.

ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುವ ಹಿನ್ನೆಲೆ ರಾಜೇಶ್‌ ಶೇಟ್ ಎಂಬುವರು ಹಲವು ಬಾರಿ ರಾಷ್ಟ್ರೀಯ ಹೆದ್ದಾರಿ ಸಹಾಯವಾಣಿಗೆ ದೂರು ಸಹಸಲ್ಲಿಸಿದ್ದರಂತೆ. ಆದರೆ, ಈ ಬಗ್ಗೆ ಒಂದೂವರೆ ವರ್ಷದಿಂದ ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ "ಜಾಗ ಮಾರಾಟಕ್ಕಿದೆ" ವ್ಯವಸ್ಥಾಪಕರು-ಶಾಸಕರು ಶಿರಸಿ ಸಿದ್ದಾಪುರ ಕ್ಷೇತ್ರ ಎಂದು ಬರೆದು ಕಾಂಪೌಂಡ್​ಗೆ ಬೋರ್ಡ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಇದು ತಮ್ಮ ವಿಧಾನಸಭಾ ವ್ಯಾಪ್ತಿಯಲ್ಲಿ ಬರುತ್ತದೆ. ಶಿರಸಿ ಕುಮಟಾ ಮಾರ್ಗ ಬಂದ್ ಆದಲ್ಲಿ, ಈ ಮಾವಿನಗುಂಡಿ ರಸ್ತೆಯು ಹೊನ್ನಾವರ-ಸಿದ್ದಾಪುರ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿರುತ್ತದೆ. ಆದರೆ, ರಸ್ತೆ ದುರಸ್ಥಿಗೊಂಡು ಒಂದೂವರೆ ವರ್ಷ ಕಳೆದಿದ್ದು ಈವರೆಗೂ ಕ್ರಮ ಕೈಗೊಂಡಿಲ್ಲ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿದ್ದೆಯಲ್ಲಿದ್ದು, ಇನ್ನಾದರೂ ಎದ್ದು ಸೂಕ್ತ ಕ್ರಮ ತೆಗೆದುಕೊಳ್ಳಲಿ ಎಂದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Last Updated : Nov 9, 2020, 8:39 PM IST

ABOUT THE AUTHOR

...view details