ETV Bharat Karnataka

ಕರ್ನಾಟಕ

karnataka

ETV Bharat / state

ಲಂಚ ಸ್ವೀಕಾರ: ಎಸಿಬಿ ಬಲೆಗೆ ಬಿದ್ದ ಹೆಸ್ಕಾಂ ಎಂಜಿನಿಯರ್ - undefined

5 ಸಾವಿರ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಕಾರವಾರದ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಹೆಸ್ಕಾಂ ಅಧೀಕ್ಷಕ ಇಂಜಿನಿಯರ್​ ಶಶಿಧರ್​ ಅವರನ್ನು ಬಲೆಗೆ ಕೆಡವಿದ್ದಾರೆ.

ಎಂಜಿನಿಯರ್​
author img

By

Published : Jul 5, 2019, 5:30 PM IST

ಶಿರಸಿ:ಸರ್ಕಾರಿ ಕಚೇರಿಗೆ ಬಾಡಿಗೆ ವಾಹನದ ಗುತ್ತಿಗೆಗೆ ಅನುಮತಿ ನೀಡಲು ಲಂಚ ಸ್ವೀಕರಿಸುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಹೆಸ್ಕಾಂ ಅಧೀಕ್ಷಕ ಇಂಜಿನಿಯರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಎಸಿಬಿ ಕಚೇರಿ
ಶಿರಸಿಯಲ್ಲಿರುವ ಹೆಸ್ಕಾಂ ಮುಖ್ಯ ಕಚೇರಿಯಲ್ಲಿ ಬಳಸುವ ಬಾಡಿಗೆ ವಾಹನದ ಗುತ್ತಿಗೆಗೆ ಅನುಮತಿ ನೀಡಲು ಇವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚದ ಮೊತ್ತವನ್ನು ಸ್ವೀಕರಿಸುವ ಸಂದರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಇಂಜಿನಿಯರ್ ಒ.ಎಸ್ ಶಶಿಧರ್​ ಅವರನ್ನು ವಶಕ್ಕೆ ಪಡೆಯಲಾಗಿದೆ.ಬಾಡಿಗೆ ವಾಹನದ ನವೀಕರಣ ಮಾಡಲು ಕಳೆದ ಕೆಲ ವರ್ಷಗಳಿಂದ ಹೆಸ್ಕಾಂನಲ್ಲಿ ಟೆಂಡರ್ ಮೂಲಕ ಬಾಡಿಗೆ ವಾಹನ ಚಲಾಯಿಸುತ್ತಿದ್ದ ರತ್ನಾಕರ ಎಂಬುವರಿಂದ ಲಂಚದ ಬೇಡಿಕೆ ಇಟ್ಟಿದ್ದರು. ಲಂಚವನ್ನು ಲೈನ್ ಮೆನ್ ನಾಗರಾಜ ಮೂಲಕ ಪಡೆಯುವಾಗ ಎಸಿಬಿ ಡಿಎಸ್.ಪಿ. ಗಿರೀಶ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

For All Latest Updates

TAGGED:

ABOUT THE AUTHOR

...view details