ಕರ್ನಾಟಕ

karnataka

ETV Bharat / state

ಹೆಸ್ಕಾಂ ನಿರ್ಲಕ್ಷ್ಯದಿಂದ ಮೃತಪಟ್ಟ ಜೋಡೆತ್ತು - Hescom

ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಬೊಮಡಿಕೊಪ್ಪದಲ್ಲಿ ಮಳೆ ಗಾಳಿಯ ತೀವ್ರತೆಯಿಂದ ರಸ್ತೆ ಮೇಲೆ ಹರಿದು ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಎರಡು ಎತ್ತುಗಳು ಸಾವನ್ನಪ್ಪಿವೆ. ಇದಕ್ಕೆ ಹೆಸ್ಕಾಂ ನಿರ್ಲಕ್ಷ್ಯ ಕಾರಣ ಎಂಬ ಆರೋಪ ಕೇಳಿಬಂದಿದೆ.

ಹೆಸ್ಕಾಂ ನಿರ್ಲಕ್ಷ್ಯದಿಂದ ಮೃತಪಟ್ಟ ಜೋಡೆತ್ತು

By

Published : Jun 16, 2019, 4:43 PM IST

ಶಿರಸಿ: ಮಳೆ-ಗಾಳಿಯ ತೀವ್ರತೆಯಿಂದ ರಸ್ತೆ ಮೇಲೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಗೆ ಎರಡು ಎತ್ತುಗಳು ಬಲಿಯಾಗಿವೆ. ಉತ್ತರ ಕನ್ನಡ ಜಿಲ್ಲೆಯ ಬೊಮಡಿಕೊಪ್ಪದಲ್ಲಿ ಈ ದುರ್ಘಟನೆ ಸಂಭವಿಸಿದೆ.

ತುಂಡಾಗಿ ಬಿದ್ದಿದ್ದ ವಿದ್ಯುತ್​​ ತಂತಿಯನ್ನು ಸೂಕ್ತ ಸಮಯಕ್ಕೆ ತೆರವುಗೊಳಿಸದೇ ಹೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಈ ಘಟನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಈ ಮೃತ ಎತ್ತುಗಳು ಬೊಮಡಿಕೊಪ್ಪದ ವಾಸು ಪಟಕಾರೆ ಎಂಬ ರೈತನಿಗೆ ಸೇರಿವೆ. ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆ-ಗಾಳಿಗೆ ವಿದ್ಯುತ್ ತುಂಡಾಗಿ ಬಿದ್ದಿದ್ದರೂ ಅದನ್ನು ಹೆಸ್ಕಾಂ ಸಿಬ್ಬಂದಿ ತೆರವುಗೊಳಿಸಿಲ್ಲ. ಹೀಗಾಗಿ ವಿದ್ಯುತ್​ ಶಾಕ್​ನಿಂದ ತನ್ನ ಎತ್ತುಗಳು ಮೃತಪಟ್ಟಿವೆ ಎಂದು ಮಾಲೀಕ ಕಣ್ಣೀರಿಟ್ಟಿದ್ದಾನೆ.

ಮಳೆಯಾಗಿದ್ದರಿಂದ ಭತ್ತದ ಗದ್ದೆ ಕೆಲಸಕ್ಕೆ ರೈತ ಎತ್ತುಗಳನ್ನು ತೆಗೆಡದುಕೊಂಡು ಹೋಗುತ್ತಿರುವಾಗ ಈ ಅವಘಡ ಸಂಭವಿಸಿದೆ. ಜೋಡೆತ್ತುಗಳ ಸಾವಿನಿಂದ 60 ಸಾವಿರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ಕೃಷಿ ಕೆಲಸಕ್ಕೂ ಇದರಿಂದ ಅಡ್ಡಿಯಾಗಿದೆ. ತಕ್ಷಣವೇ ಹೆಸ್ಕಾಂ ಅಧಿಕಾರಿಗಳು ಎತ್ತಿನ ಮಾಲೀಕನಿಗೆ ಪರಿಹಾರ ಒದಗಿಸಿಬೇಕು ಎಂದು ರೈತರು ಆಗ್ರಹಿಸಿದ್ದಾರೆ.

For All Latest Updates

TAGGED:

Hescom

ABOUT THE AUTHOR

...view details