ಕರ್ನಾಟಕ

karnataka

ETV Bharat / state

ಅತಿವೃಷ್ಟಿಗೆ ಬಾಳೆ, ಶುಂಠಿ ಬೆಳೆ ನಾಶ: ರೈತರು ಕಂಗಾಲು - ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ

ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಮುಂಡಗೋಡ, ಯಲ್ಲಾಪುರ ಭಾಗಗಳಲ್ಲಿ ಸುರಿದ ಭಾರಿ ಮಳೆಗೆ ಬಾಳೆ ಹಾಗೂ ಶುಂಠಿ ಸಂಪೂರ್ಣ ನಾಶವಾಗಿದೆ. ಸರ್ಕಾರದಿಂದ ಪರಿಹಾರಕ್ಕಾಗಿ ರೈತರು ಒತ್ತಾಯಿಸುತ್ತಿದ್ದಾರೆ.

ಅತಿವೃಷ್ಟಿಯಿಂದ ಬಾಳೆ, ಶುಂಠಿ ಬೆಳೆ ನಾಶ

By

Published : Oct 27, 2019, 11:52 AM IST

ಶಿರಸಿ: ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಗೆ ರೈತರು ತತ್ತರಿಸಿದ್ದಾರೆ. ಶಿರಸಿ, ಮುಂಡಗೋಡ, ಯಲ್ಲಾಪುರ ಭಾಗಗಳಲ್ಲಿ ಬೆಳೆದು ನಿಂತ ಬಾಳೆ ನೆಲಕಚ್ಚಿದೆ. ಬನವಾಸಿಯಲ್ಲಿ 200ಕ್ಕೂ ಅಧಿಕ ಹೆಕ್ಟೇರ್ ಪ್ರದೇಶದ ಬಾಳೆ ನಾಶವಾಗಿದೆ.

ಅತಿವೃಷ್ಟಿಯಿಂದ ಬಾಳೆ, ಶುಂಠಿ ಬೆಳೆ ನಾಶ

ಇನ್ನೇನು ಕಟಾವು ಮಾಡಿ, ಮಾರುಕಟ್ಟೆಗೆ ಸಾಗಿಸಬೇಕಿದ್ದ ಬಾಳೆಗೊನೆಗಳು ಸಂಪೂರ್ಣವಾಗಿ ಹಾಳಾಗಿದೆ. ಎಕರೆ ಬೆಳೆಗೆ 1 ಲಕ್ಷದವರೆಗೆ ಹಣ ಖರ್ಚು ಮಾಡಲಾಗಿದೆ. ಸರ್ಕಾರ ಪರಿಹಾರ ನೀಡಿದರೆ ರೈತರು ಬದುಕಿಕೊಳ್ಳುತ್ತಾರೆ ಎನ್ನುತ್ತಾರೆ ರೈತ ಚಂದ್ರಶೇಖರ ಗೌಡ.

ಬಾಳೆ ಜೊತೆ ಬಯಲುಸೀಮೆ ಬೆಳೆಗಳಾದ ಶುಂಠಿ ಸಹ ಹಾಳಾಗಿದೆ. ಗದ್ದೆಗಳಲ್ಲಿ ನೀರು ನಿಂತು ಕೊಳೆತು ಹೋಗಿದೆ. ಖರ್ಚು ಮಾಡಿದ ಅರ್ಧದಷ್ಟಾದ್ರೂ ಸರ್ಕಾರ ಪರಿಹಾರ ನೀಡಬೇಕು ಎಂದು ರೈತ ಮಂಜುನಾಥ ಮನವಿ ಮಾಡಿದ್ದಾರೆ.

ಅತಿವೃಷ್ಟಿಯಿಂದ ರೈತರ ಬದುಕು ಬರಡಾಗಿದ್ದು, ಸರ್ಕಾರ ಶೀಘ್ರವೇ ಕೂಡಲೇ ನೆರವಿಗೆ ದಾವಿಸಬೇಕು ಎಂಬುದು ರೈತಾಪಿ ವರ್ಗದ ಒತ್ತಾಯವಾಗಿದೆ.

ABOUT THE AUTHOR

...view details