ಕರ್ನಾಟಕ

karnataka

ETV Bharat / state

ಕಾರವಾರದಲ್ಲಿ ವರುಣನ ಅಬ್ಬರ: ಅಕಾಲಿಕ ಮಳೆಗೆ ಜನ, ವ್ಯಾಪಾರಸ್ಥರು ತತ್ತರ - ಕಾರವಾರದಲ್ಲಿ ವರುಣನ ಅಬ್ಬರ,

ಕಾರವಾರದಲ್ಲಿ ಮಳೆ ಅಬ್ಬರ ಜೋರಾಗಿದೆ. ಅಕಾಲಿಕ ಮಳೆಯಿಂದಾ ಏನೂ ಸಿದ್ಧತೆ ಇಲ್ಲದೆ ಆಗಮಿಸಿದ್ದ ವ್ಯಾಪಾರಸ್ಥರು ಸೇರಿದಂತೆ ಜನ ಕೆಲ ಕಾಲ ತೊಂದರೆಗೆ ಸಿಲುಕುವಂತಾಯಿತು.

heavy rain lashes in Karwar
ಕಾರವಾರದಲ್ಲಿ ಮಳೆ ಅಬ್ಬರ..

By

Published : May 9, 2021, 12:14 PM IST

ಕಾರವಾರ: ಕೊರೊನಾ ಅಬ್ಬರದ ನಡುವೆ ಕರಾವಳಿ ಭಾಗದಲ್ಲಿ ಮಳೆ ಸುರಿಯಲಾರಂಭಿಸಿದೆ. ಅಕಾಲಿಕ ಮಳೆಗೆ ನಗರದ ವ್ಯಾಪಾರಸ್ಥರು ಹಾಗೂ ಜನ ಕೆಲ ಕಾಲ‌ ತೊಂದರೆಗೆ ಸಿಲುಕಿದರು.

ಕಾರವಾರದಲ್ಲಿ ಮಳೆ ಅಬ್ಬರ..

ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ 10 ಗಂಟೆವರೆಗೆ ಮಾತ್ರ ಮಾರುಕಟ್ಟೆಗೆ ಆಗಮಿಸಲು ಅವಕಾಶ ನೀಡಿದ ಹಿನ್ನೆಲೆ ಜನ ಅಗತ್ಯ ವಸ್ತುಗಳ ಖರೀದಿಗೆ ಮುಗ್ಗಿಬಿದ್ದಿದ್ದರು. ಆದರೆ ಇದೇ ವೇಳೆಗೆ ಏಕಾಏಕಿ ಮಳೆ ಸುರಿಯಲಾರಂಭಿಸಿದ್ದು, ಅಕಾಲಿಕ ಮಳೆಗೆ ಏನು ಸಿದ್ಧತೆ ಇಲ್ಲದೆ ಆಗಮಿಸಿದ್ದ ವ್ಯಾಪಾರಸ್ಥರು ಸೇರಿದಂತೆ ಜನ ಕೆಲ ಕಾಲ ತೊಂದರೆ ಅನುಭಸಿದರು.

ನಗರದಲ್ಲಿ ಸುಮಾರು ಅರ್ಧ ಗಂಟೆಯಿಂದ ಮಳೆ ಸುರಿಯಲಾರಂಭಿಸಿದ್ದು, ಗುಡುಗು ಜೋರಾಗಿದೆ. ಅಲ್ಲದೇ ಕರಾವಳಿಯ ಅಂಕೋಲಾ, ಕುಮಟಾ, ಹೊನ್ನಾವರ ಭಾಗದಲ್ಲಿ ಮೋಡ ಕವಿದ ವಾತವಾರಣವಿದ್ದು, ಮಳೆ ಬರುವ ಸಾಧ್ಯತೆ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ABOUT THE AUTHOR

...view details